ಉದಯವಾಹಿನಿ, ವಾಷಿಂಗ್ಟನ್: ಮಾರಣಾಂತಿಕ ಹ್ಯಾಂಟಾವೈರಸ್ ಹರಡಿರುವ ಪ್ರವಾಸಿ ಹಡಗಿನಲ್ಲಿರುವ ಎಲ್ಲ ಪ್ರಯಾಣಿಕರನ್ನು ಮುನ್ನೆಚ್ಚರಿಕೆ ಕ್ರಮವಾಗಿ ‘ಹೆಚ್ಚಿನ ಅಪಾಯದ ಸಂಪರ್ಕಗಳು’ ಎಂದು ಪರಿಗಣಿಸಲಾಗಿದೆ ಎಂದು ಯುರೋಪ್‌ನ ಸಾರ್ವಜನಿಕ ಆರೋಗ್ಯ ಸಂಸ್ಥೆಯು ತಿಳಿಸಿದೆ. ಎಂವಿ ಹೊಂಡುರಾಸ್ ಹಡಗು ರವಿವಾರ ಸ್ಪೇನ್‌ನ ಟೆನೆರೈಫ್ ದ್ವೀಪದ ಬಳಿ ಲಂಗರು ಹಾಕುವ ನಿರೀಕ್ಷೆಯಿದೆ.
ಐರೋಪ್ಯ ರೋಗ ತಡೆ ಮತ್ತು ನಿಯಂತ್ರಣ ಕೇಂದ್ರವು (ಇಸಿಡಿಪಿಸಿ) ಶನಿವಾರ ಹೊರಡಿಸಿರುವ ತುರ್ತು ವೈಜ್ಞಾನಿಕ ಸಲಹೆಯಲ್ಲಿ,
ಸೋಂಕಿನ ಯಾವುದೇ ಲಕ್ಷಣಗಳಿಲ್ಲದ ಪ್ರಯಾಣಿಕರನ್ನು ಸಾಮಾನ್ಯ ವಾಣಿಜ್ಯ ವಿಮಾನಗಳ ಬದಲಿಗೆ ಅವರ ದೇಶಗಳು
ವಿಶೇಷವಾಗಿ ವ್ಯವಸ್ಥೆಗೊಳಿಸಿದ ಸಾರಿಗೆಯ ಮೂಲಕ ಸ್ವಯಂ-ಕ್ವಾರಂಟೈನ್ ಗಾಗಿ ಸ್ವದೇಶಕ್ಕೆ ಮರಳಿ ಕಳುಹಿಸಲಾಗುವುದು
ಎಂದು ತಿಳಿಸಿದೆ.
