ಉದಯವಾಹಿನಿ, ಢಾಕಾ: ಅಕ್ರಮ ವಲಸಿಗರನ್ನು ನವದೆಹಲಿಯು ವಾಪಾಸ್ ಕಳುಹಿಸುವುದನ್ನು ವೇಗಗೊಳಿಸಲು ಪರಿಗಣಿಸುತ್ತಿರುವುದಾಗಿ ಹೇಳಿದ ಬಳಿಕ ಭಾರತದಿಂದ ಹೆಚ್ಚಿನ ಬಾಂಗ್ಲಾದೇಶಿಗರು ವಾಪಾಸ್ ಬರುವ ಆತಂಕದ ಹಿನ್ನೆಲೆಯಲ್ಲಿ ಢಾಕಾ ತನ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಎಚ್ಚರಿಕೆ ನೀಡಿದೆ.ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಗೆಲುವುಡ್ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಿಂದ ಹೆಚ್ಚಿನ ಅಕ್ರಮ ಬಾಂಗ್ಲಾದೇಶಿಗರು ವಾಪಾಸ್ ಬರುವ ಆತಂಕದ ಹಿನ್ನೆಲೆಯಲ್ಲಿ ಢಾಕಾ ಈ ಎಚ್ಚರಿಕೆಯನ್ನು ನೀಡಿದೆ ಎನ್ನಲಾಗಿದೆ.
ನವದೆಹಲಿಯು ಗುರುವಾರ ಈ ಕುರಿತು ಹೇಳಿಕೆ ನೀಡಿದ್ದು, ಭಾರತದಿಂದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ವಾಪಸ್ ಕಳುಹಿಸುವ ಪರಿಶೀಲನಾ ಪ್ರಕ್ರಿಯೆಯನ್ನು ವೇಗಗೊಳಿಸುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಅವರು ಭಾರತದಿಂದ ಯಾವುದೇ ರೀತಿಯಲ್ಲಿ ವಲಸೆ ಬರುವವರನ್ನು ತಡೆಯಲು ಗಡಿಗಳಲ್ಲಿ ಜಾಗರೂಕರಾಗಿರಲು ಗಡಿ ಕಾವಲುಗಾರ ಬಾಂಗ್ಲಾದೇಶ (ಬಿಜಿಬಿ) ಕ್ಕೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
