ಉದಯವಾಹಿನಿ, ಬೀಜಿಂಗ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಬಹುನಿರೀಕ್ಷಿತ ಭೇಟಿಗೆ ಸಜ್ಜಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಎರಡೂ ದೇಶಗಳ ಸಂಬಂಧಗಳು ವಿಶಾಲವಾಗಿ ಸ್ಥಿರಗೊಳ್ಳುತ್ತಿರುವ ಸುಳಿವು ನೀಡಿದೆ. ಈ ಭೇಟಿಯಲ್ಲಿ ಚೀನಾ ಮತ್ತು ಅಮೆರಿಕ ನಡುವಿನ ದೀರ್ಘಕಾಲೀನ ಸಂಘರ್ಷಗಳಿಗೆ ಪರಿಹಾರ ದೊರೆಯುವ ಸಾಧ್ಯತೆಯನ್ನು ಕೆಲವರು ನಿರೀಕ್ಷಿಸಿದ್ದಾರೆ.
ಪ್ರಬಲ ದೇಶಗಳ ನಾಯಕರ ಭೇಟಿಯ ಕುರಿತು ಮಾತನಾಡಿರುವ ವಾಷಿಂಗ್ಟನ್‌ನ ಕಾರ್ಯತಂತ್ರ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರದ ಚೀನಾ ಅಧ್ಯಯನಗಳ ಫ್ರೀಮನ್ ಚೇರ್‌ನ ಹಿರಿಯ ಸಹೋದ್ಯೋಗಿ ಹೆನ್ರಿಯೆಟ್ಟಾ ಲೆವಿನ್ ಅವರು, ಯುಎಸ್-ಚೀನಾ ಸಂಬಂಧಗಳಲ್ಲಿ ಸ್ಥಿರತೆ ಮುಖ್ಯ ಎಂಬ ಬಗ್ಗೆ ಎರಡೂ ಕಡೆಗಳಲ್ಲಿ ಒಮ್ಮತವಿದೆ. ಒಮ್ಮೆ ಸ್ಥಿರತೆ ದಾಟಿದ ನಂತರ ಸಂಬಂಧಗಳು ಸ್ವಲ್ಪ ಹೆಚ್ಚು ಜಟಿಲವಾಗುತ್ತವೆ. ಆ ಕಾರಣಕ್ಕಾಗಿ ಸಭೆಯಿಂದ ಹೊರಬರುವ ಸಾಧ್ಯತೆ ಬಹಳ ಕಡಿಮೆ ಎಂದರು.
ವ್ಯಾಪಾರ ಒಪ್ಪಂದ ಹೊರತು ಪರಿಹಾರವಿಲ್ಲ: ಟ್ರಂಪ್ ಅವರ ಮೊದಲ ಅವಧಿಯೊಂದಿಗೆ ಚೀನಾ ಯುಎಸ್ ವ್ಯಾಪಾರ ಯುದ್ಧ ಪ್ರಾರಂಭವಾಗಿತ್ತು. ಆದರೆ, ಕಳೆದ ಏಪ್ರಿಲ್‌ನಲ್ಲಿ ಟ್ರಂಪ್ ಎಲ್ಲಾ ಚೀನೀ ಸರಕುಗಳ ಮೇಲೆ ಶೇ.34ರಷ್ಟು ಸುಂಕ ಘೋಷಿಸಿದಾಗ ಎರಡೂ ದೇಶಗಳ ನಡುವಿನ ಸಂಬಂಧ ಹಳಸಲು ಶುರುವಾಯಿತು. ಇದಕ್ಕೆ ಪ್ರತಿಯಾಗಿ ಚೀನಾ ಪ್ರತಿ ಸುಂಕಗಳು ಮತ್ತು ಅಪರೂಪದ ಖನಿಜಗಳ ರಫ್ತಿನ ಮೇಲಿನ ನಿರ್ಬಂಧಗಳಂತಹ ಇತರ ಕ್ರಮಗಗಳನ್ನು ಕೈಗೊಂಡಿತು.
ಅತೀ ಹೆಚ್ಚಿನ ಸುಂಕಗಳು ಸಮರ್ಥನೀಯವಲ್ಲ ಎಂದರಿತುಕೊಂಡ ಎರಡೂ ಕಡೆಯವರು, ವ್ಯಾಪಾರ ಒಪ್ಪಂದಕ್ಕೆ ಕರೆ ಕೊಟ್ಟರು. ಇಬ್ಬರು ನಾಯಕರು ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾದಲ್ಲಿ ಭೇಟಿಯಾಗಿ ಒಪ್ಪಂದವನ್ನು ಮತ್ತೊಂದು ವರ್ಷ ವಿಸ್ತರಿಸಿದರು. ಈ ಬಾರಿ ಎರಡೂ ಕಡೆಯವರು ಸಮಗ್ರ ವ್ಯಾಪಾರ ಒಪ್ಪಂದವನ್ನು ಘೋಷಿಸಬಹುದು. ಆದರೆ ಇದರರ್ಥ ಯುದ್ಧ ಮುಗಿದಿದೆ ಎಂದಲ್ಲ, ಈ ಒಪ್ಪಂದ ಷರತ್ತುಗಳನ್ನು ಹೊಂದಿರುತ್ತದೆ ಎಂಬುದನ್ನು ಗಮನಿಸಬೇಕು.
ಏಪ್ರಿಲ್‌ನಲ್ಲಿ ಚೀನಾ ಹೊಸ ನಿಯಮಗಳನ್ನು ಹೊರಡಿಸಿತ್ತು. ಇರಾನ್ ಕಚ್ಚಾ ತೈಲವನ್ನು ಖರೀದಿಸಿದ ಪೆಟ್ರೋಲಿಯಂ ಸಂಸ್ಕರಣಾಗಾರದಂತಹ ಪ್ರಭಾವಿತ ಕಂಪನಿಗಳ ಮೇಲೆ ಅಮೆರಿಕದ ನಿರ್ಬಂಧಗಳನ್ನು ನಿರ್ಲಕ್ಷಿಸುವಂತೆ ಚೀನಾದ ವಾಣಿಜ್ಯ ಸಚಿವಾಲಯ ತಿಳಿಸಿತ್ತು.ಈ ಬಾರಿ ಎರಡೂ ದೇಶಗಳ ವ್ಯಾಪಾರ ಒಪ್ಪಂದದ ಮುಂದುವರಿಕೆಯನ್ನು ಘೋಷಿಸಬಹುದು ಎಂಬ ನಿರೀಕ್ಷೆ ಇದೆ. ವ್ಯಾಪಾರ ಮಂಡಳಿ ರಚಿಸುವ ಬಗ್ಗೆ ಚರ್ಚಿಸಲು ಸಹ ಯೋಜಿಸುತ್ತಿರುವುದಾಗಿ ಶ್ವೇತಭವನ ಭಾನುವಾರ ತಿಳಿಸಿದೆ.ಇನ್ನು ಮಧ್ಯಪ್ರಾಚ್ಯದಲ್ಲಿ ಅಮೆರಿಕ ಸೃಷ್ಟಿಸಿಕೊಂಡಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಚೀನಾಕ್ಕೆ ಯಾವುದೇ ಆಸಕ್ತಿ ಇಲ್ಲ ಎಂದು ಲೆವಿನ್ ತಿಳಿಸಿದ್ದಾರೆ.
ಆದರೆ, ಕೆಲವು ದಿನಗಳ ಹಿಂದೆ ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ಇರಾನ್ ಮೇಲೆ ಒತ್ತಡ ಹೇರುವಂತೆ ಚೀನಾಕ್ಕೆ ಅಮೆರಿಕ ಕರೆ ನೀಡಿತ್ತು. ಇರಾನಿನ ತೈಲವನ್ನು ಖರೀದಿಸುವ ಮೂಲಕ ಬೀಜಿಂಗ್ ಭಯೋತ್ಪಾದನೆಗೆ ಹಣಕಾಸು ಒದಗಿಸುತ್ತಿದೆ ಎಂದು ಆರೋಪಿಸಿತ್ತು.

Leave a Reply

Your email address will not be published. Required fields are marked *

error: Content is protected !!