ಉದಯವಾಹಿನಿ, ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಶಾಂತಿ ಪ್ರಸ್ತಾವನೆ ಯೋಜನೆಯನ್ನು ತಿರಸ್ಕರಿಸಿದ್ದಾರೆ. ಕದನ ವಿರಾಮವು ಕೃತಕ ಉಸಿರಾಟದ​ ಮೇಲೆ ನಿಂತಿದೆ ಎಂದು ಹೇಳಿದ್ದಾರೆ.ಮಾತೃತ್ವ ಆರೋಗ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಸಂವಹನ ನಡೆಸಿದ ಅವರು, ಇರಾನ್ ಅತ್ಯಂತ ದುರ್ಬಲ ರಾಷ್ಟ್ರವಾಗಿದೆ ಎಂದಿದ್ದಾರೆ. ಟೆಹ್ರಾನ್‌ನ ಪ್ರಸ್ತಾಪವನ್ನು ಕಸದ ಡಬ್ಬಿಗೆ ಹಾಕಬೇಕಿದೆ ಇದು ಸ್ವೀಕಾರಾರ್ಹವಲ್ಲ ಎಂದು ಜರಿದಿದ್ದಾರೆ. ಅವರು ನಮಗೆ ಕಳುಹಿಸಿದ ಆ ಕಸಕ್ಕೆ ಹಾಕುವ ವಿಷಯವನ್ನು ಸಂಪೂರ್ಣವಾಗಿ ಓದಲು ಹೋಗಲಿಲ್ಲ. ಇರಾನ್​ ಈಗ ಕೃತಕ ಉಸಿರಾಟದಲ್ಲಿದ್ದಾರೆ ಎಂದು ಟ್ರಂಪ್​ ಹೇಳಿದರು.ಇರಾನ್ ಅನ್ನು ಸೋಲಿಸಲಾಗಿದೆ ಎಂಬ ತಮ್ಮ ಹೇಳಿಕೆಗಳನ್ನು ಪುನರುಚ್ಚರಿಸಿದ ಟ್ರಂಪ್, ಕದನ ವಿರಾಮದ ಅವಧಿಯಲ್ಲಿ ಇರಾನ್ ಏನೇ ಸಣ್ಣದನ್ನು ನಿರ್ಮಿಸಿದ್ದರೂ ಅಮೆರಿಕ ಅದನ್ನು ಒಂದು ದಿನದಲ್ಲಿ ಹೊಡೆದುರುಳಿಸುತ್ತದೆ ಎಂದು ಹೇಳಿದರು. ತುಂಬಾ ಅಪಾಯಕಾರಿ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ ಎಂದು ಅವರು ಮತ್ತೆ ಪುನರುಚ್ಚರಿಸಿದರು.

ಅಮೆರಿಕ ಅಧ್ಯಕ್ಷರು ತಾವು ಹಾಕಿರುವ ದಿಗ್ಬಂಧನವನ್ನು ಸಮರ್ಥಿಸಿಕೊಂಡಿದ್ದು,ಇದನ್ನು ಮಿಲಿಟರಿ ಪ್ರತಿಭೆಯ ಭಾಗವೆಂದು ಕರೆದರು ಮತ್ತು ವಾಷಿಂಗ್ಟನ್ ಉತ್ತಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ. ಎರಡು ತಿಂಗಳ ಹಿಂದೆ ಅದು ಮೊದಲು ದಾಳಿ ಮಾಡಿದ್ದಕ್ಕಿಂತ ಈಗ ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದೇವೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಇರಾನಿನ ನಾಯಕತ್ವವನ್ನು ಹಲವಾರು ಹಂತಗಳಲ್ಲಿ ಕೊಲ್ಲಲಾಗಿದೆ ಎಂದು ಟ್ರಂಪ್​ ಹೇಳಿದ್ದಾರೆ. ಸ್ಪಷ್ಟವಾಗಿ ಹೇಳುವುದಾದರೆ ಅವರಲ್ಲಿ ಮೊದಲ ಹಂತದ, ಎರಡನೇ ಹಂತದ ಹಾಗೂ ಈಗ ಮೂರನೇ ಹಂತದ ನಾಯಕರನ್ನು ಕೊಂದು ಹಾಕಿದ್ದೇವೆ. ಈಗ ಅವರು ಮಾತುಕತೆ ನಡೆಸಲು ಬಯಸುತ್ತಿದ್ದಾರೆ. ಅವರು ನಮಗೆ ಮೂರ್ಖತನದ ಪ್ರಸ್ತಾಪವನ್ನು ನೀಡುತ್ತಾರೆ. ಯಾರೂ ಅದನ್ನು ಸ್ವೀಕರಿಸುವುದಿಲ್ಲ. ಒಬಾಮಾ ಆಗಿದ್ದರೆ ಒಪ್ಪುತ್ತಿದ್ದರೇನೋ, ಬೈಡನ್​ ಆಗಿದ್ದರೆ ಸ್ವೀಕರಿಸುತ್ತಿದ್ದರು ಎಂದು ಟ್ರಂಪ್​ ಇದೇ ವೇಳೆ ಅಮೆರಿಕದ ಹಿಂದಿನ ಆಡಳಿತದ ವಿರುದ್ಧವೂ ಟೀಕಿಸಿದರು.

 

Leave a Reply

Your email address will not be published. Required fields are marked *

error: Content is protected !!