ಉದಯವಾಹಿನಿ, ದುರ್ಬಲಗೊಳ್ಳುತ್ತಿರುವ ಅಟ್ಲಾಂಟಿಕ್ ಸಾಗರದ ಪ್ರವಾಹ ಭಾರತದ ಮಾನ್ಸೂನ್ ಮಳೆಯ ಸ್ಥಿತಿಯನ್ನೇ ಬದಲಾಯಿಸುವ ಭಯ ಕಾಡುತ್ತಿದೆ. ಇದು ವಿಶೇಷವಾಗಿ ಮಧ್ಯ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಮಾನ್ಸೂನ್ ಮಳೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಅಂದಹಾಗೆ ಅಟ್ಲಾಂಟಿಕ್ ಸಾಗರದ ಪ್ರವಾಹ ಎಂದರೇನು? ಇದಕ್ಕೂ ಭಾರತದ ಮಾನ್ಸೂನ್ ಮಳೆಗೂ ಇರುವ ಸಂಬಂಧವೇನು? ಇದು ಹೇಗೆ ಮಾನ್ಸೂನ್‌ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
‌ಅಟ್ಲಾಂಟಿಕ್ ಮೆರಿಡಿಯನಲ್ ಓವರ್‌ಟರ್ನಿಂಗ್ ಸರ್ಕ್ಯುಲೇಷನ್ (AMOC) ಭೂಮಿಯ ಪ್ರಮುಖ ಸಾಗರ ಪರಿಚಲನಾ ವ್ಯವಸ್ಥೆಯಾಗಿದೆ. ಇದನ್ನು ಸಾಮಾನ್ಯವಾಗಿ ದೈತ್ಯ ಸಾಗರ ʻಕನ್ವೇಯರ್ ಬೆಲ್ಟ್ʼ ಎಂದು ಕರೆಯಲಾಗುತ್ತದೆ. ಇದು ಉಷ್ಣವಲಯದಿಂದ ಬೆಚ್ಚಗಿನ ಮೇಲ್ಮೈ ನೀರನ್ನು ಉತ್ತರದ ಅಟ್ಲಾಂಟಿಕ್ ಸಾಗರಕ್ಕೆ ಮತ್ತು ತಂಪಾದ ನೀರನ್ನು ಆಳವಾದ ಸಾಗರ ಪ್ರವಾಹಗಳ ಮೂಲಕ ದಕ್ಷಿಣಕ್ಕೆ ಕಳುಹಿಸುತ್ತದೆ.
ಈ ಪರಿಚಲನೆಯು ಭೂಮಿಯ ಶಾಖವನ್ನು, ಜಾಗತಿಕ ಹವಾಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಏಷ್ಯಾ ಸೇರಿದಂತೆ ಬಹು ಖಂಡಗಳಲ್ಲಿ ಮಳೆ ವ್ಯವಸ್ಥೆ, ತಾಪಮಾನ, ಚಂಡಮಾರುತ ಮತ್ತು ಮಾನ್ಸೂನ್ ಮೇಲೆ ಪ್ರಭಾವ ಬೀರುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಹವಾಮಾನ ಬದಲಾವಣೆಯಿಂದ AMOC ದುರ್ಬಲಗೊಳ್ಳುತ್ತಿರುವ ಸೂಚನೆ ಸಿಗುತ್ತಿದೆ. ಇದು ಗ್ರೀನ್‌ಲ್ಯಾಂಡ್‌ನ ಮಂಜುಗಡ್ಡೆ ಕರಗುವಿಕೆಗೂ ಕಾರಣವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!