ಉದಯವಾಹಿನಿ, ಇಸ್ಲಾಮಾಬಾದ್‌: ಅಮೆರಿಕದ ದಾಳಿಯಿಂದ ತಪ್ಪಿಸಿಕೊಳ್ಳಲು ಇರಾನ್ ಯುದ್ಧ ವಿಮಾನಗಳಿಗೆ ಪಾಕಿಸ್ತಾನ ಆಶ್ರಯ ನೀಡಿದೆ ಎಂಬ ಅಮೆರಿಕದ ಮಾಧ್ಯಮ ವರದಿಯನ್ನು ಪಾಕಿಸ್ತಾನ ನಿರಾಕರಿಸಿದೆ.
ಅಮೆರಿಕದ ಸಿಬಿಎಸ್‌ ಸುದ್ದಿ ಸಂಸ್ಥೆ ಪ್ರಕಟಿಸಿದ್ದ ವರದಿಯಲ್ಲಿ, ಅಮೆರಿಕದ ದಾಳಿಯಿಂದ ರಕ್ಷಣೆ ನೀಡುವ ಉದ್ದೇಶದಿಂದ ಆರ್ಸಿ-130 ರಿಕನೈಸಾನ್ಸ್ ವಿಮಾನ ಸೇರಿದಂತೆ ಕೆಲವು ಇರಾನ್ ಯುದ್ಧ ವಿಮಾನಗಳನ್ನು ರಾವಲ್ಪಿಂಡಿ ಸಮೀಪದ ನೂ‌ರ್ ಖಾನ್ ವಾಯುನೆಲೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿತ್ತು.
ಈ ಬೆಳವಣಿಗೆಯ ಬೆನ್ನಲ್ಲೇ, ಇರಾನ್-ಅಮೆರಿಕ ನಡುವಿನ ಶಾಂತಿ ಮಾತುಕತೆಗಳು ಸೂಕ್ಷ್ಮಹಂತ ತಲುಪಿವೆ. ಇರಾನ್ ನೀಡಿದ್ದ ಶಾಂತಿ ಪ್ರಸ್ತಾವವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತ್ಯಾಜ್ಯದ ತುಂಡು’ ಎಂದು ಟೀಕಿಸಿದ್ದರು. “ಆ ಪ್ರಸ್ತಾವನೆಯನ್ನು ಪೂರ್ಣವಾಗಿ ಓದಲೂ ಇಲ್ಲ” ಎಂದೂ ಅವರು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!