ಉದಯವಾಹಿನಿ, ಟೆಹ್ರಾನ್: ಅಮೆರಿಕ-ಇರಾನ್ ಸಂಘರ್ಷದ ನಡುವೆ ಮಧ್ಯವರ್ತಿಯಾಗಿ ತನ್ನನ್ನು ತಾನು ಬಿಂಬಿಸಿಕೊಂಡಿದ್ದ ಪಾಕಿಸ್ತಾನ, ಸಂಭಾವ್ಯ ಅಮೆರಿಕದ ವಾಯುದಾಳಿಗಳಿಂದ ರಕ್ಷಿಸಿಕೊಳ್ಳಲು ಇರಾನ್ ನ ಮಿಲಿಟರಿ ವಿಮಾನಗಳಿಗೆ ತನ್ನ ವಾಯುನೆಲೆಗಳನ್ನು ಬಳಸಲು ಅವಕಾಶ ನೀಡಿದೆ ಎಂಬ ಆರೋಪ ಕೇಳಿಬಂದಿದೆ.
ಅಮೆರಿಕದ ಮಾಧ್ಯಮ ಸಂಸ್ಥೆ ಸಿಬಿಎಸ್ ನ್ಯೂಸ್ ಪ್ರಕಟಿಸಿರುವ ವರದಿ ವಾಷಿಂಗ್ಟನ್ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಉದ್ವಿಗ್ನತೆಯ ನಡುವೆ ಇಸ್ಲಾಮಾಬಾದ್ ನ ‘ತಟಸ್ಥ ಮಧ್ಯವರ್ತಿ’ ಪಾತ್ರದ ಕುರಿತು ಪ್ರಶ್ನೆಗಳು ಉದ್ಭವಿಸಿವೆ.

Leave a Reply

Your email address will not be published. Required fields are marked *

error: Content is protected !!