ಉದಯವಾಹಿನಿ, ನೀಟ್ ಪರೀಕ್ಷೆ ರದ್ದಾದ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಸಚಿವ ಸಂತೋಷ್ ಲಾಡ್, ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಾ, ‘ಧುರಂಧರ್’ ಸಿನಿಮಾದ ನಿರ್ದೇಶಕ ಆದಿತ್ಯ ಧರ್ಗೆ ಸವಾಲೊಂದನ್ನು ಹಾಕಿದರು. ‘ನಿರ್ದೇಶಕ ಆದಿತ್ಯ ಧರ್ ಅವರು ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಮಾಡಿದ್ದಾರೆ. ನಾನು ಅವರಿಗೆ ಮನವಿ ಮಾಡುತ್ತಿದ್ದೇನೆ. ಅವರು ‘ವ್ಯಾಪಂ’ ಹಗರಣದ ಬಗ್ಗೆಯೂ ಸಿನಿಮಾ ಮಾಡಬೇಕು. ಅದೊಂದು ಕುತೂಹಲಕಾರಿ ಹಗರಣ’ ಎಂದು ಸಂತೋಷ್ ಲಾಡ್ ವ್ಯಂಗ್ಯ ಮಾಡಿದ್ದಾರೆ.
