ಉದಯವಾಹಿನಿ ಹೊಸಕೋಟೆ :ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರಜೊತೆಗೆ ಭವ್ಯ ಭಾರತದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು.ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಸಹಕರಿಸುತ್ತಿರುವುದು ಅಭಿನಂದನಾರ್ಹ ವಿಷಯ ಎಂದು ಶಾಸಕ ಶರತ್ ಬಚ್ಚೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ನಂದಗುಡಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆರ್‌ಎಡಿಎಫ್ ಅನುದಾನದಲ್ಲಿ ೫೫ ಲಕ್ಷರೂ. ವೆಚ್ಚದಕಾಲೇಜು ನೂತನ ಕೊಠಡಿಗಳನ್ನು ಉದ್ಘಾಟಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ.ಸರಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕಾರ ಮತ್ತು ಶಿಕ್ಷಣ ಇಲಾಖೆ ಸಾಕಷ್ಟು ಶ್ರಮಿಸುತ್ತಿದೆ.ಸಂಘ, ಸಂಸ್ಥೆಗಳು ಸರಕಾರಿ ಶಾಲೆಗಳ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ತಾಲೂಕಿನ ಹಲವು ಶಾಲೆಗಳು ಕಟ್ಟಡಕೊರತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನುಎದುರಿಸುತ್ತಿದ್ದು,ಈ ಬಗ್ಗೆ ಸರಕಾರದ ಗಮನಕ್ಕೆ ತಂದು, ವಿಶೇಷ ಅನುದಾನದಜೊತೆಗೆ ದಾನಿಗಳ ನೆರವು ಪಡೆದುತ್ವರಿತವಾಗಿ ಸರಕಾರಿ ಶಾಲೆಗಳ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿಇನೋಟೇಡ್ ಕ0ಪನಿಯವರು ನಿರ್ಮಿಸಿಕೊಟ್ಟ ಹೈಟೆಕ್ ಶೌಚಾಲಯವನ್ನು ಹಸ್ತಾಂತರಿಸಿ ಶಾಲಾಭಿವೃದ್ಧಿಗೆ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷಎಲ್.ಎನ್.ಟಿ. ಮಂಜುನಾಥ್, ನಿರ್ದೇಶಕ ರವಿಂದ್ರ,ಎಸ್‌ಎಫ್‌ಸಿಎಸ್ ಅಧ್ಯಕ್ಷಎಸ್. ಮಂಜುನಾಥ್, ದಾನಿಗಳಾದ ಕಲ್ಕೆರೆಕೆ.ಎಸ್. ಮಹದೇವಯ್ಯ, ಎಂ.ಮ0ದೀಪ್‌ಗೌಡ, ಗ್ರಾಪಂ.ಅಧ್ಯಕ್ಷೆ ಮಂಜುಳನಾಗೇಶ್, ಉಪಾಧ್ಯಕ್ಷೆಗಾಯಿತ್ರಿ ನಾಗೇಶ್, ಸದಸ್ಯರಾದ ವೀರರಾಜ್, ಎನ್.ಎನ್.ಮಂಜುನಾಥ್, ತಮ್ಮಣ್ಣಗೌಡ, ಚಂದಪ್ಪ, ಕಮಲಶಿವು, ಮುನಿವೆಂಕಟಮ್ಮಬಚ್ಚಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ಗಂಗಾಧರ್, ಪ್ರಾಂಶುಪಾಲ ಸಿದ್ದರಾಮಯ್ಯ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.
