ಉದಯವಾಹಿನಿ ತಾಳಿಕೋಟೆ: ತಾಲೂಕಿನ ಬ.ಸಾಲವಾಡಗಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಸಂಗೀತಾ ಶಾಂತಪ್ಪ ಬರದೇನಾಳ ಹಾಗೂ ಉಪಾಧ್ಯಕ್ಷರಾಗಿ ಸವಿತಾ ಸಾಹೇಬಗೌಡ ಗುಡಗುಂಟಿ ಅವಿರೋಧವಾಗಿ ಆಯ್ಕೆಯಾದರು.ಗುರವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಸಂಗೀತಾ ಶಾಂತಪ್ಪ ಬರದೇನಾಳ, ಉಪಾಧ್ಯಕ್ಷ ಸ್ಥಾನಕ್ಕೆ ಸವೀತಾ ಸಾಹೇಬಗೌಡ ಗುಡಗುಂಟಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾದ ಸಹಾಯಕ ಕೃಷಿ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ ಘೋಷಣೆ ಮಾಡಿದರು. ಸಹಾಯಕರಾಗಿ ಎಸ್.ಜಿ.ಕಟ್ಟಿಮನಿ, ಎಸ್.ವಾಯ್.ಸಾಗರ, ಪಿಡಿಓ ಎಸ್.ವಾಯ್.ತಳವಾರ ಕಾರ್ಯನಿರ್ವಹಿಸಿದರು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.
ಮಾಜಿ ತಾಪಂ ಅಧ್ಯಕ್ಷ ರಾಜುಗೌಡ ಕೋಳೂರ, ಮುಖಂಡ ಮಲ್ಲನಗೌಡ ಪೊಲೀಸ್‌ಪಾಟೀಲ ನೇತೃತ್ವದಲ್ಲಿ ಮೊದಲ ಬಾರಿಗೆ ಮೊದಲ ಬಾರಿಗೆ ಜೆಡಿಎಸ್ ತೆಕ್ಕೆಗೆ ಲಭಿಸಿತು. ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಸನಗೌಡ ವಣಕ್ಯಾಳ, ಮುಖಂಡ ಮಡುಸಾಹುಕಾರ ಬಿರಾದಾರ, ಪ್ರಭುಗೌಡ ಅನಂತರಡ್ಡಿ, ಸೋಮನಗೌಡ ಅನಂತರೆಡ್ಡಿ, ಪ್ರಭುಗೌಡ ಗುರಡ್ಡಿ, ದೊಡ್ಡಪ್ಪಗೌಡ ಮುಂದಿಮನಿ, ನಾನಾಗೌಡ ಅನಂತರೆಡ್ಡಿ, ನಾನಾಗೌಡ ಯಾಳಗಿ, ಕುಮಾರ ಅನಂತರೆಡ್ಡಿ, ರಾಜುಗೌಡ ಯಾಳಗಿ, ಮಲ್ಲನಗೌಡ ಯಾಳಗಿ, ರಾಮನಗೌಡ ಪಾಟೀಲ, ಶ್ರೀಕಾಂತ ದೊಡಮನಿ, ಶ್ರೀಕಾಂತ ಮಾಡಗಿ, ಸಾಹೇಬಗೌಡ ಬಾವೂರ, ಬಸನಗೌಡ ಪಾಟೀಲ, ರಾಮನಗೌಡ ಪಾಟೀಲ, ಶರಣಗೌಡ ಪಾಟೀಲ ಸೇರಿದಂತೆ ಇತರರು ಇದ್ದರು. ಜೆಡಿಎಸ್ ಅಭಿಮಾನಿಗಳು ಹಾಗೂ ಬೆಂಬಲಿಗರು ಪಟಾಕ್ಷಿ ಸಿಡಿಸಿ ಸಹಿ ಹಂಚಿ ಸಂಭ್ರಮಿಸಿದರು, ಪಿಎಸೈ ಆರ್.ಎಸ್.ಭಂಗಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.
