ಉದಯವಾಹಿನಿ, ಮುಂಬೈ:
ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯರಲ್ಲಿ ತಾಪ್ಸಿ ಪನ್ನು ಸಹ ಒಬ್ಬರಾಗಿದ್ದಾರೆ. ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ದೊಡ್ಡ ಸ್ಟಾರ್ ನಟರ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು.
ಸದ್ಯ ಬಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಆಕೆ ಮತಷ್ಟು ಹಾಟ್ ಆಗಿದ್ದಾರೆ. ಇದೀಗ ಆಕೆ ಮೈಂಡ್ ಬ್ಲೋಯಿಂಗ್ ಪೋಸ್ ಗಳನ್ನು ಕೊಟ್ಟಿದ್ದು, ಆ ವಿಡಿಯೋ ಸಖತ್ ವೈರಲ್ ಆಗುತ್ತಿವೆ. ಬಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ತಾಪ್ಸಿ ಪನ್ನು ಲೇಡಿ ಓರಿಯೆಂಟೆಡ್, ಕಥೆಗೆ ಬಲವಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಬಳಿಕ ಆಕೆ ಮತಷ್ಟು ಬೋಲ್ಡ್ ಆಗಿದ್ದಾರೆ. ಕೆಲವೊಂದು ಸಂದರ್ಶನಗಳಲ್ಲೂ ಸಹ ಬೋಲ್ಡ್ ಆಗಿಯೇ ಮಾತನಾಡುತ್ತಿದ್ದಾರೆ. ಜೊತೆಗೆ ಸೊಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವಂತಹ ತಾಪ್ಸಿ ಬ್ಯಾಕ್ ಟು ಬ್ಯಾಕ್ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಲೆದರ್ ಟಾಪ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೊಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.
