ಉದಯವಾಹಿನಿ,ನವದಹಲಿ
: ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ – ಬ್ರಿಕ್ಸ್ ವಿಸ್ತರಣೆಯನ್ನು ಭಾರತ ವಿರೋದಿಸಲಾಗುತ್ತಿದೆ ಎನ್ನುವುದು ಆಧಾರ ರಹಿತ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಬ್ರಿಕ್ಸ್ ವಿಸ್ತರಣೆಯನ್ನು ಭಾರತ ವಿರೋಧಿಸುತ್ತದೆ ಎಂಬ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದು ಊಹಾಪೋಹ ಎಂದು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಅರ್ಜೆಂಟೀನಾ, ಇರಾನ್, ಇಂಡೋನೇಷ್ಯಾ ಮತ್ತು ಕಝಾಕಿಸ್ತಾನ್ ದೇಶಗಳು ಗುಂಪಿಗೆ ಸೇರಲು ತೀವ್ರ ಆಸಕ್ತಿ ತೋರಿಸಿವೆ.ಇದಕ್ಕೆ ಭಾರತ ವಿರೋಧಿಸುತ್ತಿದೆ ಎನ್ನುವ ಸುದ್ದಿಗಳು ಹರಿದಾಡಿದ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಬಗ್ಗೆ ಚರ್ಚಿಸಲು ಸಿದ್ಧವಾಗಿದೆ, ಭಾರತ ವಿಸ್ತರಣೆ ವಿರೋಧಿಸುತ್ತದೆ ಎಂಬ “ಆಧಾರ ರಹಿತ” ವರದಿಗಳನ್ನು ಅವರು ತಳ್ಳಿಹಾಕಿದ್ಧಾರೆ. ಆಗಸ್ಟ್ ೨೨ ರಿಂದ ೨೪ ರವರೆಗೆ ನಡೆಯಲಿರುವ ಐದು ರಾಷ್ಟ್ರಗಳ ಗುಂಪಿನ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಹಾಜರಾತಿ ಕುರಿತು ನವದೆಹಲಿ ಇನ್ನೂ ಅಂತಿಮ ನಿರ್ಧಾರ ತೆಗದುಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ಧಾರೆ.
