ಉದಯವಾಹಿನಿ, ನವದೆಹಲಿ
: “ಹಿಂದೂ ಫೈರ್ ಬ್ರಾಂಡ್” ಎಂದು ಹೇಳಿಕೊಳ್ಳುವ ನಾಯಕರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಲು ಕಳುಹಿಸುತ್ತಾರೆ ಮತ್ತು ಬಲಪಂಥೀಯ ಸಂಘಟನೆಗಳಿಗೆ ಸೇರಲು ಬಿಡುವುದಿಲ್ಲ ಎನ್ನುವ ಬಜರಂಗ ದಳದ ಟೀಕೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ನೀಡಿದ್ದಾರೆ. ತಮ್ಮ ೨೨ ವರ್ಷದ ಪುತ್ರ ಎಲ್ಲಿ ಓಡಬೇಕು,ಏನು ಮಾಡಬೇಕು ಎನ್ನುವುದು ಅವನ ಆಯ್ಕೆ, ಮಗಳ ಪಾಶ್ವಿಮಾತ್ಯ ಬಟ್ಟೆ ಧರಿಸಿರುವುದು ಟೀಕೆ ಸರಿಯಲ್ಲ. ಮಕ್ಕಳ ಬಗ್ಗೆ ನಾವು ಸರಿಯಾದ ಆಯ್ಕೆ ಮಾಡುವುದಿಲ್ಲ ಎನ್ನುವ ಭಾವನೆ ತಪ್ಪು, ಭಜರಂಗದ ದಳದ ಟೀಕೆ ಊಹೆಗೂ ನಿಲುಕದ್ದು ಎಂದು ತಿಳಿಸಿದ್ದಾರೆ. ಪತ್ನಿ ರಿಂಕು ಅವರ ಜನ್ಮದಿನದ ಸಂಭ್ರಮ ನಂತರ ಮಗಳು,ಮಗ ,ಪತ್ನಿ ಜೊತೆಗಿರುವ ಭಾವಚಿತ್ರವನ್ನು ಟ್ವಟ್ಟರ್ ನಲ್ಲಿ ಹಂಚಿಕೊಂಡಿರುವ ಹಿಮಂತ ಬಿಸ್ವಾ ಶರ್ಮಾ ತೀವ್ರ ಟೀಕೆ ಎದುರಿಸಿದ್ದು ಅದಕ್ಕೆ ಪ್ರತಿಕ್ರಿಯಿಸಿ . “ಸರಿಯಾದ ವಯಸ್ಸಿನಲ್ಲಿ” “ಸರಿಯಾದ ಆಯ್ಕೆಗಳನ್ನು” ಮಾಡುತ್ತಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಕೇವಲ ಒಂದು ಕುಟುಂಬದ ಛಾಯಾಚಿತ್ರದಿಂದ ಇಂತಹ ತೀವ್ರ ತೀರ್ಮಾನಗಳನ್ನು ತೆಗೆದುಕೊಂಡಿರುವುದು ನನಗೆ ಆಶ್ಚರ್ಯಕರವಾಗಿದೆ.” ‘ನನ್ನ ಮಗನಿಗೆ ಪ್ರಸ್ತುತ ೨೨ ವರ್ಷ ಮತ್ತು ಓದುತ್ತಿದ್ದಾನೆ. ಸರಿಯಾದ ವಯಸ್ಸಿನಲ್ಲಿ ಸರಿಯಾದ ಆಯ್ಕೆಗಳನ್ನು ಮಾಡುತ್ತಾನೆ ಎಂದಿದ್ದಾರೆ.
ಹರಿಯಾಣದ ನುಹ್‌ನಲ್ಲಿ ಭಜರಂಗದಳದ ಸದಸ್ಯರನ್ನು ಒಳಗೊಂಡ ಕೋಮು ಹಿಂಸಾಚಾರದ ಮಧ್ಯೆ ಹಿಮಂತ ಬಿಸ್ವಾ ಶರ್ಮಾ ಭೋಜನದ ನಂತರದ ಕುಟುಂಬದ ಛಾಯಾಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿದೆ,ಅನೇಕ ನೆಟ್ಟಿಗರು, ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಅಂತಹ ಸಂಘಟನೆಗಳಿಗೆ ಸೇರಲು ಬಿಡುವುದಿಲ್ಲ. ಅಮಾಯಕ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುತ್ತಾರೆ ಎಂದು ಟೀಕೆ ವ್ಯಕ್ತಪಡಿಸಿದ್ಧಾರೆ.
