
ಉದಯವಾಹಿನಿ ಮಾಲೂರು:- ನಗರ್ತ ಯುವಕ ಸಂಘ ವತಿಯಿಂದ ನಗರ್ತ ಸಾಧಕ 2023ರ ಸನ್ಮಾನ ಕಾರ್ಯಕ್ರಮ. ದಿನಾಂಕ: 06.08.2023ರ ಭಾನುವಾರ ಸಂಜೆ 4:00ಗಂಟೆಗೆ ಶ್ರೀಜಗದ್ಗುರು ರೇಣುಕಾಚಾರ್ಯ ಕಾಲೇಜ್ ಸಭಾಂಗಣ ಆನಂದ್ ರಾವ್ ವೃತ್ತ ಬೆಂಗಳೂರು ಇಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ನೂರು ಜನ್ಮಕ್ಕೂ ನೂರಾರು ಜನ್ಮಕ್ಕೂ ಎಂಬ ಶೀರ್ಷಿಕೆ ಅಡಿಯಲ್ಲಿ ನಗರ್ತ ಯುವಕರ ಸಂಘ ವತಿಯಿಂದ ವಿದ್ಯಾರ್ಥಿ ವೇತನ ಸಹಾಯಾರ್ಥ ರಸಮಂಜರಿ ಪ್ರದರ್ಶನ ಹಾಗೂ ನಗರ್ತ ಯುವ ಸಾಧಕ 2023 ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಗರ್ತ ಯುವ ಸಾಧಕರು 2023 ಶ್ರೀ ಚಂದನ್.ಪಿ ಆರ್ ಸಂಸ್ಥಾಪಕರು ನೇಟಿವ್ ಡ್ರೀಮ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್, ಶ್ರೀ ನಹುಷ್ ಪಿ.ಎನ್ ಮತ್ತು ಕುಮಾರಿ ಗಾನವಿ.ಎಸ್ ಇವರಿಗೆ ಸನ್ಮಾನ ನಡೆಯಲಿದೆ.ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕ ರಾಜೇಶ್ ಕೃಷ್ಣನ್ ಹಾಗೂ ರೆಮೊ ಭಾಗವಹಿಸಲಿದ್ದಾರೆ. ಅಯೋಧ್ಯ ನಗರ ಶಿವಾಚಾರ‍್ಯ ವೈಶ್ಯ ನಗರ್ತ ವಿದ್ಯಾವರ್ಧಕ ಸಂಘದ ವತಿಯಿಂದ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯ ಪಠ್ಯಕ್ರಮಕ್ಕೆ 85%, ಸಿಬಿಎಸ್‌ಇ, ಐಸಿಎಸ್‌ಸಿ 80%, ಅಂಕಗಳು, ಹಾಗೂ ಪಿಯುಸಿ 80% ಮತ್ತು ಪದವಿಯಲ್ಲಿ ಶೇ 85% ರಷ್ಟು ಅಂಕಗಳನ್ನು ಪಡೆದಿರುವ ಅಯೋಧ್ಯ ನಗರ ಶಿವಾಚರ‍್ಯ ವೈಶ್ಯ ನಗರ್ತ ವಿದ್ಯಾರ್ಥಿಗಳು ಆ.31 ರೊಳಗೆ ಅಧ್ಯಕ್ಷರು ಗೌರವ ಕಾರ್ಯದರ್ಶಿ ಎಎಸ್‌ವಿಎನ್‌ವಿ ಸಂಘ, ಕೆ.ಜಿ ರಸ್ತೆ ಬೆಂಗಳೂರು ಇವರಿಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕೆಂದು, 08022263642, 9482913642 ಸಂಖ್ಯೆಗೆ ಸಂಪರ್ಕಿಸುವಂತೆ ಎಎಸ್‌ವಿಎನ್‌ವಿ ಸಂಘದ ಮಾಲೂರು ನಿದೇರ್ಶಕ ನಂಜುಂಡಪ್ಪ ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು ಡಾ.ಸಿ ಸೋಮಶೇಖರ್ ರವರು ನಿವೃತ್ತ ಐಎಎಸ್ ಅಧಿಕಾರಿಗಳು ಉದ್ಘಾಟಿಸಲಿದ್ದಾರೆ, ಹಾಗೂ ಕಾರ್ಯಕ್ರಮದಲ್ಲಿ ಎಸ್.ಪ್ರಕಾಶ್ ಅಧ್ಯಕ್ಷರು, ಎಎಸ್‌ವಿಎನ್‌ವಿ ಸಂಘ ಎಂ.ಎಸ್‌ಕೃಷ್ಣಮೂರ್ತಿ ಕಾರ್ಯದರ್ಶಿಗಳು, ಯುವಕ ಸಂಘದ ಅಧ್ಯಕ್ಷ ಎಸ್.ಸಚ್ಚಿನ್, ಕಾರ್ಯದರ್ಶಿ ಸುಮನ್.ಎಸ್ ಇವರು ಉಪಸ್ಥಿತರಿರಲಿದ್ದಾರೆ.
