
ಉದಯವಾಹಿನಿ ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ಜಾಲಿಗೆ ಗ್ರಾಮ ಪಂಚಾಯಿತಿಗೆ 2ನೇ ಅವಧಿಗೆ ಗುರುವಾರ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರಗಾದಿ ಹಿಡಿದಿದ್ದು, ಅಧ್ಯಕ್ಷರಾಗಿ ಎಸ್.ಎಂ.ಆನಂದ್ ಕುಮಾರ್, ಉಪಾಧ್ಯಕ್ಷರಾಗಿ ಭವ್ಯ.ಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.23 ಸದಸ್ಯರನ್ನು ಒಳಗೊಂಡಿರುವ ಜಾಲಿಗೆ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿಂಗರಹಳ್ಳಿಯ ಆನಂದ್ ಕುಮಾರ್ ಹಾಗೂ ಮುನಿರತ್ನಮ್ಮ ಉಮೇದುವಾರಿಗೆ ಸಲ್ಲಿಸಿದ್ದು 13 ಮತಗಳನ್ನು ಪಡೆಯುವ ಮೂಲಕ ನೂತನ ಅಧ್ಯಕ್ಷರಾಗಿ ಎಸ್.ಎಂ.ಆನಂದ್ ಕುಮಾರ್ ಜಯಗಳಿಸಿದ್ದು, ಅವಿರೋಧವಾಗಿ ಉಪಾಧ್ಯಕ್ಷೆಯಾಗಿ ಭವ್ಯ.ಕೆ ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷ ಎಸ್.ಎಂ.ಆನಂದ್ ಕುಮಾರ್ ಮಾತನಾಡಿ, ‘ಈಗಾಗಲೆ ಕಳೆದ 10 ವರ್ಷಗಳಿಂದ ಜಾಲಿಗೆ ಪಂಚಾಯಿತಿಯ ಸದಸ್ಯನಾಗಿ ಸೇವೆ ಸಲ್ಲಿಸಿದ ನನಗೆ, ಎಲ್ಲ ಸದಸ್ಯರ ಬೆಂಬಲದಿಂದ ಅಧ್ಯಕ್ಷ ಸ್ಥಾನ ಒಲಿದಿದೆ. ಈಗಾಗಲೇ ಡಿಜಿಟಲ್ ಗ್ರಂಥಾಲಯ, ವೈಜ್ಞಾನಿಕ ಘನ ತ್ಯಾಜ್ಯ ಸಂಗ್ರಹ ಕೇಂದ್ರಗಳಂತಹ ಮಾದರಿ ಕೆಲಸಗಳು ಪಂಚಾಯಿತಿ ವತಿಯಿಂದ ಆಗಿದ್ದು, ಅದಕ್ಕೆ ಇನ್ನಷ್ಟು ಹುರುಪು ನೀಡುವ ಯೋಜನೆ ಅನುಷ್ಠಾನ ಮಾಡಲಾಗುತ್ತದೆ’ ಎಂದರು.’ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನದ ಮೀಸಲಾತಿಯೊಂದಿಗೆ ಸ್ಥಳೀಯ ಸರ್ಕಾರದಲ್ಲಿ ಅಧಿಕಾರ ಹಿಡಿಯುತ್ತಿರುವುದು ಶೋಷಿತರಿಗೆ ಧಕ್ಕಿದ ಸಾಮಾಜಿಕ ನ್ಯಾಯದ ಪ್ರತೀಕವಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ನಮಗೆ ಅಭೂತ ಪೂರ್ವ ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರ ಪ್ರಶಸ್ತಿಗಳು ಜಾಲಿಗೆ ಗ್ರಾಪಂಗೆ ದೊರೆಯುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದರು.ಈ ವೇಳೆ ಗ್ರಾಪಂ ಸದಸ್ಯರಾದ ದೀಪ್ತಿ ವಿಜಯ ಕುಮಾರ್, ಬಾಲಸುಬ್ರಮಣ್ಯ, ಶಿವಲಿಂಗಮ್ಮ, ಅಶ್ವಿನಿ, ಪದ್ಮಾವತಿ, ಆನಂದ್.ಸಿ.ಎಂ, ಜಯಮ್ಮ, ಕೆಂಪರಾಜು, ಶೋಭಾ, ಆನಂದ್, ಮಂಜುಳ ನಾಗೇಶ್, ಸುಬ್ರಮಣ್ಯ, ರಾಧಮ್ಮ, ಸೌಮ್ಯಬಾಬು, ಲಕ್ಷ್ಮಮ್ಮ, ಜಿಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್, ಅರುಂಧತಿ ಸೇವಾಸಂಸ್ಥೆಯ ಅಧ್ಯಕ್ಷ ನರಸಿಂಹಮೂರ್ತಿ, ಖಜಾಂಚಿ ಮಂಜುನಾಥ್ ಅಣ್ಣೇಶ್ವರ ಗ್ರಾಪಂ ಉಪಾಧ್ಯಕ್ಷ ಮುನಿರಾಜಪ್ಪ, ಮದಿಗ ದಂಡೋರ ಜಿಲ್ಲಾಧ್ಯಕ್ಷ ಮಾರಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ಮೂರ್ತಿ, ಮುಂತಾದವರು ಇದ್ದರು.
