
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ನಾಗಾಯಿದ್ಲಾಯಿ ಗ್ರಾಮ ಪಂಚಾಯತನಲ್ಲಿ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀನಿವಾಸ ಲಿಂಗಪ್ಪ ವಾಲಿಕಾರ ಉಪಾಧ್ಯಕ್ಷರಾಗಿ ಪಾರಮ್ಮ ಬಕ್ಕಪ್ಪ ಕಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುಪ್ರಸಾದ ಕವಿತಾಳ ತಿಳಿಸಿದ್ದಾರೆ.
ಒಟ್ಟು 18ಸದಸ್ಯರ ಬಲವಿದ್ದು 17ಸದಸ್ಯರು ಹಾಜರಾಗಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆ ಆಗಿರುವುದರಿಂದ ಅವಿರೋಧವಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣೆ ನಂತರ ಬೆಂಬಲಿಗರು ಅಭಿಮಾನಿಗಳು ಹೂಮಾಲೆ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಪಿಡಿಒ ಪವನಕುಮಾರ ಮೇತ್ರಿ,ಆಕಾಶ ಕೋಳ್ಳೂರ,ಮಹೇಂದ್ರ ಕಳಸ್ಕರ,ಉದಯ ಸಿಂದೋಲ,ಸಂಗರೆಡ್ಡಿ,ಈಶ್ವರ ಕುಸರಂಪಳ್ಳಿ,ತುಳಜಪ್ಪ,ಶಿವರಾಜ ಸಿಂದೋಲ,ಶೇರಖಾನ್,ರಾಜು ಜಾಡರ,ಗೋಪಾಲರೆಡ್ಡಿ ಕೋಳ್ಳೂರ,ತಿಪ್ಪಾರೆಡ್ಡಿ,ರಾಜು ನಾಯಕ,ಅರ್ಜುನ ನಾಯಕ ಇತರರು ಇದ್ದರು.
