ಉದಯವಾಹಿನಿ, ಮಸ್ಕಿ: ತಾಲೂಕಿನ ಮಾರಲದಿನ್ನಿ ಗ್ರಾಪಂ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಶನಿವಾರ ನಡೆಯಿತು. ಅಧ್ಯಕ್ಷರಾಗಿ ಬೀರಪ್ಪ ವೆಂಕಟಾಪೂರ ಹಾಗೂ ಉಪಾಧ್ಯಕ್ಷರಾಗಿ ಲಕ್ಷಿö್ಮÃ ಮೌನೇಶ ರಾಠೋಡ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಇದ್ದ ಮೀಸಲಾತಿ ಅವಧಿ ಮುಗಿದಿರುವ ಹಿನ್ನಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಟ್ಟು ೧೨ ಮಂದಿ ಸದಸ್ಯರಲ್ಲಿ ೧೧ ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರು, ಒಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರು, ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯ ನಾಮಪತ್ರ ಸಲ್ಲಿಸಿದ್ದರು, ಇವರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣೆ ಅಧಿಕಾರಿ ಸಾಬಣ್ಣ ಅವರು ತಿಳಿಸಿದರು. ಬಳಿಕ ಗ್ರಾಪಂ ಸದಸ್ಯರು, ನೂತನ ಅಧ್ಯಕ್ಷ,ಉಪಾಧ್ಯಕ್ಷರಿಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು. ನಂತರ ನೂತನ ಅಧ್ಯಕ್ಷ ಬೀರಪ್ಪ ವೆಂಕಟಾಪೂರ ಅವರು ಮಾತನಾಡಿ, ಗ್ರಾಮದ ಅಭಿವೃದ್ದಿಗೆ ಮೂಲ ಸೌಕರ್ಯ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೆಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹೆಚ್.ಬಿ ಮುರಾರಿ, ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಟಾಕಪ್ಪ, ರೆಡ್ಡೆಪ್ಪಗೌಡ, ಸಿದ್ದನಗೌಡ ನಾಗರಬೆಂಚಿ, ಚಂದ್ರಶೇಖರ, ಶಂಕರಗೌಡ ಮಾರಲದಿನ್ನಿ, ರಾಮು ಚವ್ಹಾಣ, ಮರಿಯಪ್ಪ ಮಾರಲದಿನ್ನಿ, ಪೋಮಾನಾಯಕ, ಗ್ರಾಪಂ ಸದಸ್ಯ ಹನುಮಂತ ಮಾರಲದಿನ್ನಿ, ಶರಣಬಸವ ಡಬ್ಬೇರಮಡು, ರಮೇಶ ಉಸ್ಕಿಹಾಳ, ಸಿದ್ದು ಮುರಾರಿ ಕೋಠಾರಿ, ಗೋವಿಂದ ವೆಂಕಟಾಪೂರ, ಹನುಮೇಶ ವೆಂಕಟಾಪೂರ ಸೇರಿದಂತೆ ಇನ್ನಿತರ ಗ್ರಾಪಂ ಸದಸ್ಯರು ಉಪಸ್ಥಿತಿರಿದ್ದರು.
