
ಉದಯವಾಹಿನಿ,ಮಾಲೂರು: ತೊರ‍್ನಹಳ್ಳಿ ಗ್ರಾ.ಪಂ. ಕಚೇರಿಯ ಆವರಣದಲ್ಲಿ ಮಾಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸಮಾಜಕಾರ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು.
ಮಾಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ಸಮಾಜಕಾರ್ಯ ವಿಭಾಗ, ಸಂಪನ್ಮೂಲ ಕೇಂದ್ರ ಸಮಾಜ ಕಲ್ಯಾಣ ಇಲಾಖ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ, ತೊರ‍್ನಹಳ್ಳಿ ಗ್ರಾ.ಪಂ. ಸಹಯೋಗದೊಂದಿಗೆ 6 ದಿನಗಳ ಸಮಾಜ ಕಾರ್ಯ ಶಿಬಿರವನ್ನು ಕಾಲೇಜು ಪ್ರಾಂಶುಪಾಲ ಜಿ.ಅಶ್ವಥ ನಾರಾಯಣ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ. ಮಧುಸೂದನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಾಲೂರು ಪ್ರಥಮ ದರ್ಜೆ ಕಾಲೇಜಿಗೆ ಈ ವರ್ಷದಿಂದ ನೂತನವಾಗಿ ಬಿಸಿಎ ವಿಭಾಗವನ್ನು ಶಾಸಕರ ಪ್ರಯತ್ನದಿಂದ ಪ್ರಾರಂಭವಾಗಿದೆ, ಅದನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಿಸಿಎ ಕೋರ್ಸ ಅನುಕೂಲವಾಗಲಿದ್ದು, ವಿದ್ಯಾರ್ಥಿಗಳು ಸದುಪಯೋಗಿಸಿಕೊಳ್ಳಬೇಕೆಂದು ಹೇಳಿದರು. ಕಾಲೇಜಿಗೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಶಾಸಕರು ಮಾಡಿಕೊಡುತ್ತಾರೆ ಎಂದರು.
ಕಾಲೇಜು ಪ್ರಾಂಶುಪಾಲ ಜಿ.ಅಶ್ವಥ ನಾರಾಯಣ ಮಾತನಾಡಿ ಶಿಬಿರದಲ್ಲಿ ಭಾಗವಹಿಸು ವಿದ್ಯಾರ್ಥಿಗಳು ಸಮಯ ಪಾಲನೆ, ಗ್ರಾಮದಲ್ಲಿ ಕೈಗೊಳ್ಳುವ ಸಮಾಜ ಕಾರ್ಯಗಳು, ಕಲಿಕೆ, ನಾಯಕತ್ವ, ನಿರ್ವಹಣೆ, ವ್ಯಕ್ತಿತ್ವ ವಿಕಸನ, ಸಂಮೋಹನ ಕೌಶಲ್ಯಗಳ ಕಲಿಕೆ, ಸಾಮಾಜಿಕ ಸಮಸ್ಯೆಗಳ ಅರಿವು ಮತ್ತು ಜಾಗೃತಿ ಮೂಡಿಸುವುದು, ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಸಾಮಾಜಿಕ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕೆಂದರು.
*ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ. ಮಧುಸೂದನ್ ರವರನ್ನು ಸನ್ಮಾನ ಮಾಡಲಾಯಿತು.*
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಮುನಿಯಪ್ಪ, ಪಿಡಿಒ ಚಂಗಲರಾಯಗೌಡ.ಸಿ.ಆರ್. ರಮಾ ಮಾಧವ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಪಿ.ಜಿ.ವಿದ್ಯಾಧರಿ, ಗ್ರಂಥಾಲಯ ಮೇಲ್ವಿಚಾರಕಿ ಪಾರ್ವತಮ್ಮ, ಶಿಬಿರಾಧಿಕಾರಿ ಅನಂತರಾಜು.ಎನ್, ಸಹಾಯಕ ಶಿಬಿರಾಧಿಕಾರಿಗಳಾದ, ಉಪನ್ಯಾಸಕರಾದ ಮುನಿರಾಜು, ಬಸವರಾಜು.ಕೆ.ಎಂ ಹಾಗೂ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
