ಉದಯವಾಹಿನಿ, ಬೀದರ್ : ಮಾರುಕಟ್ಟೆಗಳು ಮತ್ತು ಅಂಗಡಿಗಳಿಂದ ತರುವ ತರಕಾರಿಗಳು ಸಾಮಾನ್ಯವಾಗಿ ರಾಸಾಯನಿಕ ಗೊಬ್ಬರಗಳ ಸಹಾಯದಿಂದ ಬೆಳೆಯಲಾಗುತ್ತದೆ ಈ ರಾಸಾಯನಿಕವು ನಮ್ಮ ಆಹಾರ ವ್ಯವಸ್ಥೆಗೆ ಹರಿದು ಅಂತಿಮವಾಗಿ ನಮ್ಮ ಆರೋಗ್ಯವನ್ನು ಅಪಾಯಕ್ಕೆ ದೂಡುತ್ತದೆ ಈ ನಿಟ್ಟಿನಲ್ಲಿ ಎಲ್ಲರು ತಮ್ಮ ಮನೆಯಂಗಳದಲ್ಲಿ ಕಿಚನ್ ಗಾರ್ಡನ್ ರೂಪಿಸಿಕೊಂಡು ಉತ್ತಮ ಹಾಗೂ ಗುಣಮಟ್ಟದ ತರಕಾರಿಗಳನ್ನು ಮನೆಯಂಗಳದಲ್ಲಿ ಬೆಳೆಯುವುದು ಒಳ್ಳೆಯದು ಎಂದು ಸೂರ್ಯ ಫೌಂಡೇಶನ್ ದಕ್ಷಿಣ ವಲಯ ಪ್ರಮುಖರಾದ ಶತ್ರುಹನ್ ಕಶ್ಯಪ್ ಅವರು ತಿಳಿಸಿದರು.
ಭಾಲ್ಕಿ ತಾಲ್ಲೂಕಿನ ರಾಚಪ್ಪಾ ಗೌಡಗಾಂವ ಗ್ರಾಮದಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಿ ಅವರು ಮಾತನಾಡಿದರು.
ಮನೆಯಂಗಳದಲ್ಲಿ ಬೆಳೆದ ತಾಜಾ ತರಕಾರಿಗಳಿಗಿಂತ ಉತ್ತಮವಾದುದು ಬೇರೆ ಯಾವುದು ಇಲ್ಲ, ಸಾವಯವ ತರಕಾರಿಗಳು ನಾವು ಮಾರುಕಟ್ಟೆಯಿಂದ ಖರೀದಿಸುವುದಕ್ಕಿಂತ ಹೆಚ್ಚು ಪೌಷ್ಟಿಕವಾಗಿರುತ್ತವೆ ಮತ್ತು ಆರೋಗ್ಯಕ್ಕೆ ಉತ್ತಮವಾಗಿರುತ್ತವೆ. ಮನೆಯಂಗಳದಲ್ಲಿಯೆ ಕಿಚನ್ ಗಾರ್ಡನ್ ರೂಪಿಸಿ ಅದರಲ್ಲಿ ಮೆಣಸಿನಕಾಯಿ, ಕುಂಬಳಕಾಯಿ, ಹೀರೇಕಾಯಿ, ಬೆಂಡಿಕಾಯಿ, ಕೊತ್ತಂಬರಿ, ಕರಿಬೇವು, ಬಿನಿಸ್ , ಚವಳೆಕಾಯಿ ಸೇರಿದಂತೆ ಇತರೆ ತರಕಾರಿಗಳನ್ನು ಬೆಳೆಯಬಹುದಾಗಿದೆ ಎಂದು ತಿಳಿಸಿದರು.
ಸೂರ್ಯ ಫೌಂಡೇಶನ್ ಸಂಯೋಜಕರಾದ ಗುರುನಾಥ ರಾಜಗೀರಾ ಮಾತನಾಡಿ ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಂತ ಬಿರಾದಾರ ಅವರ ನೇತೃತ್ವದಲ್ಲಿ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ವಿವಿಧ ರೀತಿಗ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ, ಈ ನಿಟ್ಟಿನಲ್ಲಿ ದೇಶಾದ್ಯಂತ ಫೌಂಡೇಶನ್ ವತಿಯಿಂದ ಸೂಮಾರು ಐದುನೂರಕ್ಕು ಹೆಚ್ಚು ಹಳ್ಳಿಗಳಲ್ಲಿ ಜನರ ಉತ್ತಮ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಹಾರ ಸೇವನೆಯಾಗಬೇಕೆಂಬ ಪೃಯುಕ್ತ ಕಿಚನ್ ಗಾರ್ಡನ್ ಪ್ರಾರಂಭಿಸಬೆಕೆಂಬ ಪ್ರಯುಕ್ತ ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು‌‌.
ಬಳಿಕ ರಾಚಪ್ಪಾ ಗೌಡಗಾಂವ, ಭಾತಂಬ್ರಾ ಹಾಗೂ ಲಾಧಾ ಗ್ರಾಮದಲ್ಲಿ ಫೌಂಡೇಶನ್ ವತಿಯಿಂದ ಸಾಂಕೇತಿಕವಾಗಿ ಸಸಿ ನೆಟ್ಟು ನಿರೆರೆದು ಮನೆ ಮನೆಗೆ ಹಣ್ಣಿನ ಗಿಡಗಳ ಸಸಿಗಳನ್ನು ವಿತರಿಸಿ ಸಸಿ ನೆಟ್ಟು ಅದರ ಪಾಲನೆ ಪೋಷಣೆ ಮಾಡುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ದಿಗಂಬರ ರಾವ, ರಂಗರಾವ ಬಿರಾದಾರ, ರವೀಂದ್ರ ಪಾಟೀಲ, ಮಲ್ಲಿಕಾರ್ಜುನ ಪಾಟೀಲ,
ಶಿವಕುಮಾರ ಬಿರಾದಾರ, ಸಂತೋಷ ಪವಲೆ, ಅಪ್ಪು ಹಂಜನಾಳೆ, ಶಿವಕುಮಾರ ಪವಲೆ, ಸಂಜುಕುಮಾರ ಪಾಟೀಲ, ರಾಜಕುಮಾರ, ವರುಣ ಗಾಮಾ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!