ಉದಯವಾಹಿನಿ ಕುಶಾಲನಗರ ;- ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯದಲ್ಲಿ ನಡೆದ ೨೩ ನೇ ಘಟಿಕೋತ್ಸವದಲ್ಲಿ ಬೆಂಗಳೂರಿನ ರಾಜೀವ್ ಗಾಂಧಿ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿAಗ್ ವಿಭಾಗದಲ್ಲಿ ಬಯೋಮೆಡಿಕಲ್ ಎಂಜಿನಿಯರಿ0ಗ್‌ನಲ್ಲಿ ಅಧ್ಯಯನ ಮಾಡಿದ ಬಿನ್ಸಿ ಎಂ.ಜೇಕಬ್ ಅವರು ಇಡೀ ವಿಶ್ವವಿದ್ಯಾನಿಲಯಕ್ಕೆ ಬಯೋಮೆಡಿಕಲ್ ಎಂಜಿನಿಯರಿAಗ್‌ನಲ್ಲಿ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಪಡೆದಿದ್ದಾರೆ. ಇವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಚಿನ್ನದ ಪದಕ ಪ್ರಧಾನ ಮಾಡಿದರು.
ಬಿನ್ಸಿ ಎಂ.ಜೇಕಬ್ ಅವರಿಗೆ ಬಯೋ ಮೆಡಿಕಲ್ ಎಂಜಿನಿಯರಿ0ಗ್‌ನಲ್ಲಿ ೯.೪೨ ಸಿಜಿಪಿಎ ರಷ್ಟು ಅಂಕ ಪಡೆದು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಇವರು ಮಡಿಕೇರಿ ನಗರ ನಿವಾಸಿಯಾದ ಸಜಿ ಜೇಕಬ್ ಹಾಗೂ ಬಿಂದು ಅವರ ಪುತ್ರಿಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
