
ಉದಯವಾಹಿನಿ, ಕೊಲ್ಹಾರ: ಸಂವಿಧಾನದ ಆಶಯಗಳನ್ನು ಅರಿತು ಡಾ.ಅಂಬೇಡ್ಕರ ಅವರ ಕನಸುಗಳನ್ನು ಸಾಕಾರಗೊಳಿಸಲು ಸರ್ವರು ಶ್ರಮಿಸಬೇಕಿದೆ ಎಂದು ಡಿಡಿಎಸ್ಎಸ್ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ವೈ.ಸಿ ಮಯೂರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ದಲಿತ ಸಂಘರ್ಷ ಸಮಿತಿ( ಸಾಗರ ಬಣದ) ವತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ನಮ್ಮ ಉಸಿರಾಗಬೇಕು ಅವರ ಕಾರ್ಯಗಳು ನಮಗೆ ಪ್ರೇರಣಾದಾಯಕವಾಗಬೇಕು. ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣೆ ಹಾಕಬಾರದು, ಅನ್ಯಾಯ ಕಂಡಲ್ಲಿ ವಿರೋಧಿಸಿ ತುಳಿತಕ್ಕೊಳಗಾದವರಿಗೆ ನ್ಯಾಯ ದೊರಕಿಸಲು ಹೋರಾಡಲು ಹಿಂಜರಿಯಬಾರದು ಎಂದು ಹೇಳಿದರು.
ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡುತ್ತಾ ಸಾಮಾಜದಲ್ಲಿ ಅನ್ಯಾಯಕ್ಕೊಳಗಾದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವಲ್ಲಿ ದಲಿತ ಸಂಘರ್ಷ ಸಮಿತಿ ಮುಂದೆ ನಿಲ್ಲುತ್ತವೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶರಣು ಚಲವಾದಿ, ಮಹಾಂತೇಶ ಸಾಸಾಬಾಳ, ಅವಿನಾಶ ಬಾಣಿಕೋಲ್, ನೂತನ ತಾಲೂಕ ಘಟಕದ ಸಂಚಾಲಕ ದಶರಥ ಈಟಿ, ಸಹ ಸಂಚಾಲಕ ರಾಜು ಇವಣಗಿ, ಸಹ ಸಂಚಾಲಕ ಮಲ್ಲು ಪೂಜಾರಿ, ಸಹ ಸಂಚಾಲಕ ತಿಪ್ಪಣ್ಣ ಕುದರಿ, ಖಜಾಂಚಿ ಸಿಡ್ಲಪ್ಪ ತಳಗೇರಿ ನಗರ ಘಟಕದ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿ ಇತ್ತತರು ಇದ್ದರು
