ಉದಯವಾಹಿನಿ,ತಾಳಿಕೋಟಿ: ತಾಲೂಕಿನ ತುಂಬಗಿ ಗ್ರಾಮ ಪಂಚಾಯತ ಇದರ ಎರಡನೇಯ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಅನ್ನಪೂರ್ಣ ಶೇಕು ಸಜ್ಜನ(ತುಂಬಗಿ) ಹಾಗೂ ಉಪಾಧ್ಯಕ್ಷರಾಗಿ ಗೌತಮ ಮಲ್ಲಪ್ಪ ಹರಿಜನ(ಪತ್ತೇಪೂರ) ಅವಿರೋಧವಾಗಿ ಆಯ್ಕೆಯಾದರು.
ಶನಿವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣ ಸಜ್ಜನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗೌತಮ ಎಮ್ ಹರಿಜನ ಇವರಿಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾದ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜೆ ನಾಯಕ ಅವರು ಘೋಷಿಸಿದರು.
ಅಧ್ಯಕ್ಷ ಸ್ಥಾನ ಪ್ರವರ್ಗ ಅ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪ. ಜಾತಿಗೆ ಮೀಸಲಾಗಿತ್ತು.
ಒಟ್ಟು ೧೪ಜನ ಸದಸ್ಯರ ಬಲದ ಈ ಗ್ರಾಮ ಪಂಚಾಯತನ ಚುನಾವಣೆಯಲ್ಲಿ ೧೧ಜನ ಸದಸ್ಯರು ಭಾಗ ವಹಿಸಿದ್ದರು. ಚುನಾವಣಾ ಸಹಾಯಕರಾಗಿ ಇಸಿಓ ಸುರೇಶ ಹಿರೇಮಠ ಹಾಗೂ ಪಿಡಿಓ ಸುಜಾತಾ ಯಡ್ರಾಮಿ ಕಾರ್ಯ ನಿರ್ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ಬಸನಗೌಡ ಪಾಟೀಲ, ಮಾಸೂಮಶಾ ಮಕಾನದಾರ(ಪತ್ತೇಪೂರ), ಗುರುನಾಥ ಚೌಧರಿ, ಸೋಮನಗೌಡ ಹಾದಿಮನಿ, ಅಪ್ಪಾಸಾಹೇಬಗೌಡ ಬಿರಾದಾರ, ಭೀಮನಗೌಡ ಪಾಟೀಲ, ವೀರಬಸಪ್ಪ ತೋಟದ ಉಪಸ್ಥಿತರಿದ್ದರು. ನಂತರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಭಿಮಾನಿಗಳು ಮತ್ತು ಬೆಂಬಲಿಗರು ಪಟಾಕ್ಷಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪಿಎಸೈ ಆರ್ ಎಸ್ ಭಂಗಿ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೊಬಸ್ತ ಏರ್ಪಡಿಸಲಾಗಿತ್ತು.
