ಉದಯವಾಹಿನಿ, ವಿಜಯಪುರ: ಟೌನ್ ಸಂತೆ ಮೈದಾನ, ಹೊಸ ಬಸ್ ನಿಲ್ದಾಣ, ಕೋಲಾರ ರಸ್ತೆ, ಪಂಪ್ ಹೌಸ್ ಹಿಂಬದಿಯ ಮಂಡಿಬೆಲೆ ರಸ್ತೆಯಲ್ಲಿ ನಗರಸಭೆ ಹರಾಜು ಮೂಲಕ ನೀಡಿದ ವಾಣಿಜ್ಯ ಮಳಿಗೆಗಳಿಗೆ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಬಾಡಿಗೆ ಕಟ್ಟಲು ನಿರಾಕರಿಸಿದ ಅಂಗಡಿಗಳಿಗೆ ಬೀಗ ಜಡಿದು ಮಾಲೀಕರ ವಿರುದ್ಧ ಕ್ರಮಕೈಗೊಂಡರು.
ಪುರಸಭೆ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಸಿ.ಟಿ.ತ್ಯಾಗರಾಜ್ ಮಾತನಾಡಿ, ಬಹಿರಂಗ ಹರಾಜಿನಲ್ಲಿ ಪುರಸಭೆ ಸ್ವಾಧೀನಪಡಿಸಿಕೊಂಡಿರುವ ಅಂಗಡಿಗಳು ಪ್ರತಿ ತಿಂಗಳು ೧೦ರೊಳಗೆ ಪುರಸಭೆಯಿಂದ ಚಲನ್ ಪಡೆದು ಬ್ಯಾಂಕ್ ನಲ್ಲಿ ಬಾಡಿಗೆ ಪಾವತಿಸಬೇಕು. ಹರಾಜಿನಲ್ಲಿ ಪಡೆದ ಅಂಗಡಿಯನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. ೬ ತಿಂಗಳೊಳಗೆ ಬಾಡಿಗೆ ಪಾವತಿಸದಿದ್ದಲ್ಲಿ ಮುಂಗಡ ಪಾವತಿ ಮತ್ತು ಪತ್ರವನ್ನು ರದ್ದುಪಡಿಸಿ ಕ್ರಮ ಕೈಗೊಳ್ಳಲಾಗುವುದು. ಆದರೆ ಕೆಲವು ವಾಣಿಜ್ಯ ಮಳಿಗೆಗಳ ಮಾಲೀಕರು ವರ್ಷಗಟ್ಟಲೆ ಬಾಡಿಗೆ ಬಾಕಿ ಉಳಿಸಿಕೊಂಡಿರುವುದು ಕಾನೂನು ಬಾಹಿರವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಂಡು ಅಂಗಡಿಗಳಿಗೆ ಬೀಗ ಹಾಕಲಾಗಿದೆ ಎಂದರು.
ಕಂದಾಯ ಅಧಿಕಾರಿ ಎಂ.ಚಂದ್ರು ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ವಾಣಿಜ್ಯ ಮಳಿಗೆ ಮಾಲೀಕರ ಪಾತ್ರ ಪ್ರಮುಖವಾಗಿದೆ. ಸಕಾಲದಲ್ಲಿ ಬಾಡಿಗೆ ಪಾವತಿ ಜತೆಗೆ ಪ್ಲಾಸ್ಟಿಕ್ ಕವರ್ ನಿಷೇಧ ಹಾಗೂ ಅಂಗಡಿ ಪರವಾನಗಿ ಕಡ್ಡಾಯವಾಗಿ ಪಡೆಯಲು ಎಂದು ತಿಳಿಸಿದರು. ಪಡೆಯಲು, ದ್ವಿತೀಯ ದರ್ಜೆ ಸಹಾಯಕ ಪವನ್ ಜೋಶಿ, ಸಾಲ ವಸೂಲಿಗಾರರಾದ ಸುನೀಲ್, ಅಜ್ಜತ್ ಉಲ್ಲಾ ಇದ್ದರು.
