ಉದಯವಾಹಿನಿ ತಾಳಿಕೋಟಿ: ತಾಲೂಕಿನ ಕಲಕೇರಿ ಗ್ರಾಪಂನ ಎರಡನೇಯ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷೆ ಸ್ಥಾನ ಕೈವಶವಾಗಿದ್ದು ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರಾಜಅಹ್ಮದ್ ಸಿರಸಗಿ(ಕಲಕೇರಿ) ಹಾಗೂ ಉಪಾಧ್ಯಕ್ಷೆಯಾಗಿ ವಿಜಯಲಕ್ಷಿö್ಮÃ ಪರಶುರಾಮ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಪ.ಪಂ ಮಹಿಳೆಗೆ ಮೀಸಲಾಗಿತ್ತು. ಗ್ರಾಪಂ.ನ ಓಟ್ಟು ೨೮ ಸದಸ್ಯರ ಪೈಕಿ ೨೭ಜನ ಸದಸ್ಯರು ಚುನಾವಣಾ ಪ್ರಕ್ರೀಯೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ರಾಜಅಹ್ಮದ್ ಸಿರಸಗಿ ಹಾಗೂ ಆನಂದ ಅಡಕಿ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಮತದಾನ ಜರುಗಿತು, ಇದರಲ್ಲಿ ಕಂಗ್ರೆಸಿನ ರಾಜಅಹ್ಮದ್ ಸಿರಸಗಿ ಇವರಿಗೆ ೧೫ ಮತಗಳು ಹಾಗೂ ಆನಂದ ಅಡಕಿಯವರಿಗೆ ೧೨ ಮತಗಳು ಬಂದವು ೧೫ ಮತಗಳನ್ನು ಪಡೆದ ಕಾಂಗ್ರೆಸ್ ಬೆಂಬಲಿತ ಸದಸ್ಯ ರಾಜಅಹ್ಮದ್ ಸಿರಸಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಂಗಮೇಶ ವಂದೂರ ಅವರು ಘೋಷಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷಿö್ಮÃ ಪರಶುರಾಮ ಅವರೊಬ್ಬರೆ ನಾಮಪತ್ರ ಸಲ್ಲಿಸಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. ಪಿಡಿಓ ಎನ್ ಎಸ್ ದೊಡಮನಿ, ಸಹಾಯಕ ಚುನಾವಣಾಧಿಖಾರಿಯಾಗಿ ಕಾರ್ಯ ನಿರ್ವಹಿಸಿದರು.
ವಿಜಯೋತ್ಸವ:- ನೂತನ ಅಧ್ಯಕ್ಷ ಉಪಾಧ್ಯಕ್ಷರ ಹೆಸರುಗಳು ಘೋಷಣೆಯಾಗುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾಂಗ್ರೆಸಿನ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಅಪಾರ ಅಭಿಮಾನಿಗಳು ಪಟಾಕ್ಷಿ ಸಿಡಿಸಿ ಗುಲಾಲು ಎರಚಿ ಸಿಹಿ ವಿತರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ದೇ.ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸೀರ ಶೇಠ ಬೇಪಾರಿ, ಮುಖಂಡರಾದ ಡಾ. ಪ್ರಭುಗೌಡ ಲಿಂಗದಳ್ಳಿ, ಸಂತೋಷ ದೊಡಮನಿ, ಲಕ್ಕಪ್ಪ ಬಡಿಗೇರ, ಜಹಾಂಗೀರ ಸಿರಸಗಿ, ಹಣಮಂತ ವಡ್ಡರ, ಮುನ್ನಾ ಸಿರಸಗಿ, ಮೈನೂ ಕಲಕೇರಿ, ಅನೀಲ ಬಡಿಗೇರ, ಬುಡ್ಡಾ ನಾಯ್ಕೇಡಿ ಮತ್ತೀತರರು ಉಪಸ್ಥಿತರಿದ್ದರು.
