ಉದಯವಾಹಿನಿ, ಔರಾದ್: ಬಡವರಲೇ ಕಷ್ಟಗಳು ಎಂಬಂತೆ, ಹಿಂದುಳಿದವರಲೇ ದುಶ್ಚಟಗಳ ನಿರ್ಮೂಲನೆಗೆ ಭಿಕ್ಷೆ ಬೇಡಿ, ಸುಂದರ ಜೀವನ ನಡೆಸಲು ಸದ್ಗುಣ ದೀಕ್ಷೆ ನೀಡಿದವರು ಭಾಲ್ಕಿ ಹಿರೇಮಠದ ಪೂಜ್ಯಶ್ರೀ ಗುರುಬಸವ ಪಟ್ಟದೇವರು ಎಂದು ಔರಾದ ತಾಲೂಕಾ ಜಾನಪದ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ಡಾ. ಸಂಜೀವಕುಮಾರ ಜುಮ್ಮಾ ಹೇಳಿದರು. ಸಂತಪುರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪೂಜ್ಯಶ್ರೀ ಗುರುಬಸವ ಪಟ್ಟದೇವರ 41ನೇ ಜನ್ಮ ದಿನಾಚರಣೆ ಮತ್ತು ಪ್ರಬಂಧ ವಿಜೇತ ಸ್ಪರ್ಧಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೂಜ್ಯಶ್ರೀ ಗುರುಬಸವ ಪಟ್ಟದೇವರ ಜೀವನವೇ ಅದ್ಭುತ, ಇವರು ಭಾಲ್ಕಿ ಮಠಕ್ಕೆ ಓದಲು ಬಂದವರು, ಮೂಲ ಹೆಸರು ರಾಜಕುಮಾರ, ಗುರುಬಸವ ದೇವರು, ಪಟ್ಟಾಭಿಷೇಕದ ನಂತರ ಗುರುಬಸವ ಪಟ್ಟದೇವರಾಗಿ ಸಮಾಜ ಸೇವೆ ಗೈಯುತ್ತಿದ್ದಾರೆ ಎಂದರು.ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ ಶಿಕ್ಷಣ,ಸ್ವಚ್ಛತೆ, ಧಾರ್ಮಿಕತೆ ಹಾಗೂ ಬಡ ವಿದ್ಯಾರ್ಥಿಗಳ ವಿಕಾಸಕ್ಕೆ ಪೂಜ್ಯಶ್ರೀ ಗುರುಬಸವ ಪಟ್ಟದೇವರು ಕ್ರಿಯಾಶೀಲ ಗುರುಗಳಾಗಿ ಶ್ರಮಿಸುತ್ತಿದ್ದಾರೆ. ಗಡಿ ಭಾಗದ ಜನರು ವ್ಯಸನಗಳಿಗೆ ಬಲಿಯಾಗಬಾರದು ಎಂದು ದುರ್ಗುಣಗಳ ಭಿಕ್ಷೆ ಕ್ರಾಂತಿಯನ್ನೇ ಪ್ರಾರಂಭಿಸಿದವರು ಭಾಲ್ಕಿ ಹಿರೇಮಠದ ಪೂಜ್ಯಶ್ರೀ ಗುರುಬಸವ ಪಟ್ಟದೇವರು ಎಂದರು.ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸಿದ್ಧಾರೂಢ ಪಾಂಚಾಳ, ಈರಮ್ಮ ಕಟ್ಟಗಿ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ, ಸುಧಾ ಕೌಟಿಗೆ ಇದ್ದರು.

Leave a Reply

Your email address will not be published. Required fields are marked *

error: Content is protected !!