
ಉದಯವಾಹಿನಿ ಮುದ್ದೇಬಿಹಾಳ ; ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾಪಂ ಎರಡನೇ ಅವಧಿಗಾಗಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಶ್ರೀಮತಿ ಚಂದ್ರಕಲಾ ನಾಗರಾಜ ಸತ್ಯಗೂಳ( ತಂಗಡಗಿ) ಹಾಗೂ ಉಪಾಧ್ಯಕ್ಷರಾಗಿ ಬಸಪ್ಪ ಚಲವಾದಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಸ್ ಎ ಜಮಾದಾರ ಘೋಷಣೆ ಮಾಡಿದರುಈ ವೇಳೆ ಮಾತನಾಡಿದ ನೂತನ ಅಧ್ಯಕ್ಷೆ ಚಂದ್ರಕಲಾ ನಾಗರಾಜ ಸತ್ಯಗೂಳ ಕಾಂಗ್ರೆಸ್ ಬೆಂಬಲಿತ ನಮ್ಮ ಬಸರಕೋಡ ಗ್ರಾಪಂ ಇಂದ ನಮ್ಮ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯಕ್ಕೆ ಮುಂದಾಗುತ್ತೇವೆ ಎಲ್ಲಾ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಸದಸ್ಯರ ಸಹಕಾರವನ್ನು ಪಡೆದು ಸರಕಾರದಿಂದ ಬರುವ ಸೌಲಭ್ಯಗಳನ್ನು ಒದಗಿಸುತ್ತವೆ ಎಂದರು ಕಾಂಗ್ರೆಸ್ ಪಕ್ಷದ ಮುಖಂಡ ಮಲ್ಲಿಕಾರ್ಜುನ ನಾಡಗೌಡ ಮಾತನಾಡಿ ನಮ್ಮ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಸರ್ವ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಪಕ್ಷದ ಮೇಲಿನ ನಂಬಿಕೆಯನ್ನು ತೋರಿಸಿಕೊಟ್ಟಿದ್ದು ಎಲ್ಲಾ ಸದಸ್ಯರ ನಂಬಿಕೆಯನ್ನು ನೂತನ ಅ಼ಧ್ಯಕ್ಷರು ಮಾಡುತ್ತಾರೆಂಬ ನಂಬಿಕೆ ಇದೆ ತಾಲೂಕಿನಲ್ಲಿ ಬಹುತೇಕ ಗ್ರಾಪಂ ಕಾಂಗ್ರೆಸ್ ಪಕ್ಷದ ಪಾಲಾಗುತ್ತಿದ್ದು ನಾಡಗೌಡರ ಕೈ ಬಲಪಡಿಸುವ ಕಾರ್ಯವನ್ನು ಗ್ರಾಪಂ ಸದಸ್ಯರು ಮಾಡುತ್ತಿದ್ದಾರೆ ಎಂದರು ಈ ವೇಳೆ ಸದಸ್ಯರಾದ ಗೀತಾ ಬಿದ್ನಾಳ, ಬೇಬಿ ಮೇಟಿ, ಮೀನಾಕ್ಷಿ ಮೇಟಿ,ಮಲ್ಲವ್ವ ಚಲವಾದಿ,ವರುಣರಾಜ ನಾಡಗೌಡ, ಸಂಗಣ್ಣ ಚಿನಿವಾರ,ಮಡಿವಾಳಪ್ಪ ತೋಟದ ಮುಂತಾದವರು ಉಪಸ್ಥಿತರಿದ್ದರು
