ಉದಯವಾಹಿನಿ ಸಿರುಗುಪ್ಪ : ನಗರದ ನೇತಾಜಿ ವ್ಯಾಯಾಮ ಶಾಲೆಯಲ್ಲಿ ತಾಲೂಕು ಆರ್ಯವೈಶ್ಯ ಮಂಡಳಿ ಸಮಿತಿಯಿಂದ ಅನ್ನ ಸಂತರ್ಪಣೆ ಸೇವೆ ನಡೆಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ಯವೈಶ್ಯ ಮಂಡಳಿ ತಾಲೂಕು ಅಧ್ಯಕ್ಷ ಯು.ಸಿ.ರಾಮಾಂಜಿನಯ್ಯ ಶೆಟ್ಟಿ ಮಾತನಾಡಿ ಕಳೆದ ಕೆಲವು ದಿನಗಳ ಹಿಂದೆ ನಡೆದ ವಾಸವಿ ಜಯಂತಿಯಲ್ಲಿ ನಡೆಸಬೇಕಾದ ಈ ಕಾರ್ಯಕ್ರಮವನ್ನು ಚುನಾವಣೆ ನೀತಿ ಸಂಹಿತೆಯಿರುವುದರಿ0ದ ಹಾಗೂ ಈಗ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಮಾಜಿ ನಗರಸಭೆ ಅಧ್ಯಕ್ಷರಾದ ಬಿ.ಪಾರಿಜಾತಮ್ಮ ಬಿ.ಮುತ್ತಾಲಯ್ಯ ಶೆಟ್ಟಿ ಅವರ ಕುಟುಂಬದ ವತಿಯಿಂದ ನಡೆಸಲಾಗುತ್ತಿದೆ. ಬೀದಿಬದಿ ವ್ಯಾಪಾರಿಗಳು, ವಿವಿಧ ಕಾರ್ಯಗಳಿಗಾಗಿ ಬೇರೆ ಬೇರೆ ಗ್ರಾಮಗಳಿಂದ ಬಂದಿರುವ ಗ್ರಾಮಸ್ಥರು ಇನ್ನಿತರರು ಬಂದು ಪ್ರಸಾದ ಸ್ವೀಕರಿಸಿ ಸಮಾಜದ ಕಾರ್ಯವನ್ನು ಶ್ಲಾಘಿಸಿದರೆಂದು ತಿಳಿಸಿದರು. ಬಿ.ಮುತ್ತಾಲಯ್ಯ ಮಾತನಾಡಿ ಕಾರ್ಮಿಕರು, ವ್ಯಾಪಾರಿಗಳು, ಇನ್ನಿತರ ಸಾರ್ವಜನಿಕರಿಗೆ ಶ್ರೀ ವಾಸವಿ ಮಾತೆಯ ಪ್ರಸಾದ ಲಭಿಸುವ ಉದ್ದೇಶದಿಂದ ನಮ್ಮ ಕುಟುಂಬದಿ0ದ ನಮ್ಮ ಕುಟುಂಬದಿ0ದ ಸೇವೆ ಮಾಡಲಾಗಿದ್ದು ಇದಕ್ಕಾಗಿ ಆರ್ಯವೈಶ್ಯ ಮಂಡಳಿಯ ಎಲ್ಲಾ ಪದಾಧಿಕಾರಿಗಳ ಸಹಕಾರ ನಮಗೆ ಪುಷ್ಟಿ ನೀಡಿದಂತಾಗಿದೆ0ದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷರಾದ ನಿಟ್ಟೂರು ಸುನೀಲ್‌ದತ್ತ, ನಾಗಲಾಪುರ ಷಣ್ಮುಖಶೆಟ್ಟಿ, ಮರಿಸ್ವಾಮಿ ಶೆಟ್ಟಿ, ನಾಗರಾಜಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಾಗಿ ಸುಬ್ಬಯ್ಯಶೆಟ್ಟಿ, ಪಿ.ಸನ್ನತ್‌ಕುಮಾರ್ ಹಾಗೂ ಆರ್ಯವೈಶ್ಯ ಸಮಾಜದವರು ಸಾರ್ವಜನಿಕರು ಇದ್ದರು.
