
ಉದಯವಾಹಿನಿ ಯಡ್ರಾಮಿ:ತಾಲೂಕಿನ ಮಾಗಣಗೇರಿ ಗ್ರಾಮ ಪಂಚಾಯತಿ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೊಧವಾಗಿ ಆಯ್ಕೆ ಮಾಡಲಾಯಿತ್ತು.ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನವನ್ನು ಕಲಾವತಿ ಗಂಡ ಜೇಟ್ಟೆಪ್ಪ ಕಾಡಗೋಳ ಮಾಗಣಗೇರಿ ಅವರನ್ನು ಆಯ್ಕೆ ಮಾಡಲಾಯಿತ್ತು.ಎಸ್ಸಿ ಉಪಾಧ್ಯಕ್ಷೆ ಸ್ಥಾನವನ್ನು ಸುಂದ್ರಮ್ಮ ಗಂಡ ಗೋಲ್ಲಾಳಪ್ಪ ದೊಡ್ಡಮನಿ ಕಣಮೇಶ್ವರ ಅವರನ್ನು ಆಯ್ಕೆ ಮಾಡಲಾಯಿತ್ತು.ಮೂರೂ ಗ್ರಾಮಗಳು ಒಳಗೊಂಡ ಕಣಮೇಶ್ವರ ಕೊಂಡಗೋಳಿ ಮಾಗಣಗೇರಿ ಗ್ರಾಮ ಪಂಚಾಯತಿಯಾಗಿದ್ದು.19 ಸದಸ್ಯರು ಹೊಂದಿರುವ ಗ್ರಾಮ ಪಂಚಾಯತಿಯಾಗಿದ್ದು.ಈ ಪಂಚಾಯತಿಯ ವಿಶೇಷ ಅಂದ್ರೆ ಪಂಚಾಯತಿ ಪ್ರಾರಂಭವಾದಾಗಿಂದ ಇಲ್ಲಿಯವರಿಗೂ ಕಾಂಗ್ರೆಸ್ ಅಭ್ಯರ್ಥಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷೆರನ್ನು ಆಯ್ಕೆಯಾಗುತ್ತಾರೆ ಎಂದು ಸದಸ್ಯರು ಹೇಳಿದರು. ಈ ಸಂದರ್ಭದಲ್ಲಿ ಪೂಜ್ಯ ವಿಶ್ವರಾಧ್ಯ ಶಿವಾಚಾರ್ಯರು ಮಾಗಣಗೇರಿ,ಮಡಿವಾಳಪ್ಪಗೌಡ ಪಾಟೀಲ,ಭೀಮರಾಯಗೌಡ ಬಿರಾದಾರ,ಸಿದ್ದನಗೌಡ ದಳಪತಿ,ಚಂದ್ರಕಾಂತ ಗೌಡ ಪಾಟೀಲ,ಮಲ್ಲನಗೌಡ ಬಿರಾದಾರ,ನಿಂಗನಗೌಡ ಪಾಟೀಲ,ಚನ್ನಬಸಯ್ಯ ಹಿರೇಮಠ,ಬಸವರಾಜ ಕುಂಬಾರ,ಸಿದ್ದಣ್ಣ ಕವಾಲ್ದಾರ ಕಡಕೋಳ,ಶರಣಪ್ಪ ಸಾಹು ಯತ್ನಾಳ,ರವಿ ಸಾಹುಕಾರ ದೇವರಮನಿ,ಗುರಣ್ಣಗೌಡ ಬಿರಾದಾರ, ಬಸವರಾಜ ಕೋಳಕೂರ,ಪ್ರಭುಗೌಡ ಬಿರಾದಾರ, ನರಸಪ್ಪ ಕಣಮೇಶ್ವರ,ದೊಡ್ಡಪ್ಪಗೌಡ ಕೊಂಡಗೂಳಿ, ಜೇಟ್ಟೆಪ್ಪ ಕಾಡಾಗೋಳ,ಸಿದ್ದನಗೌಡ ಪಾಟೀಲ, ಭೀಮವಗೌಡ ಸುರಗೊಂಡ,ಭೀಮನಗೌಡ ಅಲ್ಲಾಕೋಳ,ಅಮೃತ ಜಾಗಿರದಾರ,ಹಿರಗಂಟೆಪ್ಪ ನಾಟಿಕಾರ,ಮೈಬುಬ ಕೊಂಡಗೂಳಿ,ಸಿದ್ದಣ್ಣ ಪೂಜಾರಿ ಮಯೂರ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
