ಉದಯವಾಹಿನಿ, ಜೆರುಸಲೇಂ: ಉತ್ತರ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಪಡೆಗಳು ಮೂವರು ಪ್ಯಾಲೆಸ್ತೀನ್ ಉಗ್ರರನ್ನು ಕೊಂದಿದ್ದು, ಹಿಂಸಾಚಾರ ಉಲ್ಬಣಗೊಂಡಿದೆ. ಕಳೆದ ತಿಂಗಳು ದೊಡ್ಡ ಪ್ರಮಾಣದ ಸೇನಾ ಕಾರ್ಯಾಚರಣೆ ನಡೆದ ಜೆನಿನ್ ನಿರಾಶ್ರಿತರ ಶಿಬಿರದ ಬಳಿ ಮೂವರನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಮೂರು ಜನರು ಶಿಬಿರದಿಂದ ಹೊರಬಂದು ದಾಳಿ ಮಾಡಲು ಮುಂದಾದರು. ಆತನ ವಾಹನದಿಂದ ಎಂ-೧೬ ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಉಗ್ರಗಾಮಿ ಗುಂಪುಗಳು ಹತ್ಯೆಯನ್ನು ಖಂಡಿಸಿವೆ. ಆದಾಗ್ಯೂ, ಮೂವರು ವ್ಯಕ್ತಿಗಳು ಯಾವುದಾದರೂ ಸಂಘಟನೆಗೆ ಸೇರಿದವರು ಎಂಬ ಬಗ್ಗೆ ನಿಖರವಾದ ಮಾಹಿತಿ ಇದುವರೆಗೆ ತಿಳಿದಿಲ್ಲ. ಇಸ್ರೇಲ್ ಗುಂಪಿನ ನಾಯಕನನ್ನು ೨೬ ವರ್ಷದ ನೈಫ್ ಅಬು ತ್ಸುಯಿಕ್ ಎಂದು ಗುರುತಿಸಿದೆ. ಮಿಲಿಟೆಂಟ್‌ಗಳ ಭದ್ರಕೋಟೆ: ಜೆನಿನ್ ಶಿಬಿರವನ್ನು ಉಗ್ರಗಾಮಿಗಳ ಭದ್ರಕೋಟೆ ಎಂದು ಕರೆಯಲಾಗುತ್ತದೆ. ಕಳೆದ ತಿಂಗಳು, ಸೇನೆಯು ಶಿಬಿರದ ಮೇಲೆ ಎರಡು ದಿನಗಳ ದಾಳಿಯನ್ನು ಪ್ರಾರಂಭಿಸಿತು. ಇದು ಕನಿಷ್ಠ ಎಂಟು ಉಗ್ರಗಾಮಿಗಳು ಸೇರಿದಂತೆ ೧೨ ಪ್ಯಾಲೆಸ್ಟೀನಿಯನ್ನರನ್ನು ಕೊಂದಿತು. ಇದರಿಂದ ಜನನಿಬಿಡ ಪ್ರದೇಶಕ್ಕೆ ಅಪಾರ ಹಾನಿಯಾಗಿದೆ.

Leave a Reply

Your email address will not be published. Required fields are marked *

error: Content is protected !!