ಉದಯವಾಹಿನಿ, ಪಂಚಕುಲ (ಹರಿಯಾಣ​): ಹರಿಯಾಣದ ಪಂಚಕುಲದ ಆಕಾಶ್ ಧುಲ್ 2025ರಲ್ಲಿ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೂರನೇ ರ‍್ಯಾಂಕ್ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಹಿಂದಿನ ಎರಡು ಪ್ರಯತ್ನಗಳಲ್ಲಿ ಅವರು 342ನೇ ಮತ್ತು 290ನೇ ರ‍್ಯಾಂಕ್ ಗಳಿಸಿದ್ದರು.

ಧುಲ್ ಚಂಡೀಗಢದ ಸೆಕ್ಟರ್ 26 ರಲ್ಲಿರುವ ಸೇಂಟ್ ಕಬೀರ್ ಶಾಲೆ ಮತ್ತು ಸೆಕ್ಟರ್ 27 ರ ಭವನ್ ವಿದ್ಯಾಲಯ ಶಾಲೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದರು. ನಂತರ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಬಿ.ಕಾಂ (ಆನರ್ಸ್) ಪದವಿ ಪಡೆದರು. 2022 ರಲ್ಲಿ ಪದವಿ ಪೂರ್ಣಗೊಳಿಸಿದ ನಂತರ, ಅವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದರು. 2023ರಲ್ಲಿ 342ನೇ ರ‍್ಯಾಂಕ್ ಮತ್ತು 2024ರಲ್ಲಿ 290ನೇ ರ‍್ಯಾಂಕ್ ಪಡೆದರು. 2025ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನ ಪಡೆದರು.

ಸತತ ಮೂರು ಬಾರಿ ಯುಪಿಎಸ್​ಸಿ ಪಾಸ್: ಬಾಲ್ಯದಿಂದಲೂ ನನಗೆ ಭಾರತೀಯ ಆಡಳಿತ ಸೇವೆಯಲ್ಲಿ (ಐಎಎಸ್) ಸೇರಬೇಕು ಎಂಬ ಗುರಿ ಹೊಂದಿದ್ದೆ. ಮಾತ್ರವಲ್ಲ ಅದಕ್ಕಾಗಿಯೇ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಲೇ ಇದ್ದೆ. ಹಿಂದಿನ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದರೂ, ರ‍್ಯಾಂಕ್ ಬಗ್ಗೆ ಅತೃಪ್ತಿ ಇತ್ತು. ಹಾಗಾಗಿ, ಮೂರನೇ ಬಾರಿ ಪ್ರಯತ್ನ ಪಟ್ಟೆ. ಈಗ, ಮೂರನೇ ರ‍್ಯಾಂಕ್ ಪಡೆಯುವ ಮೂಲಕ, ಬಹುಕಾಲದ ಕನಸನ್ನು ನನಸಾಗಿಸಿಕೊಂಡಿದ್ದೇನೆ ಎಂದು ಖುಷಿ ಹಂಚಿಕೊಂಡರು. ತಮ್ಮ ಈ ಯಶಸ್ಸಿನ ಪ್ರಯಾಣದ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿರುವ ಆಕಾಶ್​ ಧುಲ್, ನಾಗರಿಕ ಸೇವೆಗಳಲ್ಲಿ ವೃತ್ತಿಜೀವನ ಮುಂದುವರಿಸಲು ಪ್ರೇರೇಪಿಸಿದವರು, ಪ್ರೋತ್ಸಾಹಿಸಿದವರು ನನ್ನ ಪೋಷಕರು. ನನಗೆ ಜೀವನದ ಅಂತಿಮ ಉದ್ದೇಶದ ಬಗ್ಗೆ ಅರಿವು ಮೂಡಿಸಿ, ಅದನ್ನು ಸಾಧಿಸಲು ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆ ಅತ್ಯಂತ ಸೂಕ್ತವಾದ ಮಾಧ್ಯಮವೆಂದು ವಿವರಿಸಿದವರು ನನ್ನ ಅಪ್ಪ ಅಮ್ಮ. ಜೀವನದಲ್ಲಿ ಬಂದ ಸವಾಲುಗಳನ್ನು, ಯಾವಾಗಲೂ ಕಲಿಕೆಯ ಅವಕಾಶಗಳಾಗಿ ನೋಡಲು ನನಗೆ ಕಲಿಸಿದರು. ಹಾಗಾಗಿ ಪ್ರತಿಯೊಂದು ಕಾರ್ಯದಲ್ಲೂ ಸಂಪೂರ್ಣ ಸಮರ್ಪಣೆ ಮತ್ತು ಏಕಾಗ್ರತೆಯಿಂದ ಯಶಸ್ಸನ್ನು ಸಾಧಿಸಿದ್ದೇನೆ” ಎಂದು ಹೇಳಿದರು. ನಾನು ಇಂದು ಏನಾಗಿದ್ದೇನೋ ಅದರಲ್ಲಿ ನಮ್ಮ ಕುಟುಂಬ ಪ್ರಮುಖ ಪಾತ್ರ ವಹಿಸಿದೆ. ಕುಟುಂಬದ ಬೆಂಬಲವಿಲ್ಲದೆ ವಿಶೇಷವಾದದ್ದನ್ನು ಸಾಧಿಸುವುದು ಕಷ್ಟ. ನಾನು ನಿರುತ್ಸಾಹಗೊಂಡಾಗ ಅಥವಾ ಸಹಾಯದ ಅಗತ್ಯವಿದ್ದಾಗಲೆಲ್ಲಾ ನನ್ನ ಕುಟುಂಬ ಅಲ್ಲಿತ್ತು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!