ಉದಯವಾಹಿನಿ, ವಾಷಿಂಗ್ಟನ್: ಅಮೇರಿಕಾದ ವಿವಿಧ ಭಾಗಗಳಲ್ಲಿ ಸುಂಟರಗಾಳಿ, ಆಲಿಕಲ್ಲು ಮಳೆ ಮತ್ತು ಮಿಂಚು ಸೇರಿದಂತೆ ಭಾರಿ ಪ್ರಮಾಣದ ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಮೆರಿಕದಿಂದ ವಿವಿಧೆಡೆ ಸಂಚರಿಸಬೇಕಿದ್ದ ೧,೩೦೦ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ.ಪ್ರಬಲವಾದ ಚಂಡಮಾರುತದ ಹಿನ್ನೆಲೆಯಲ್ಲಿ ನಿವಾಸಿಗಳು ಮನೆಯೊಳಗೆ ಸುರಕ್ಷಿತವಾಗಿ ಇರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ವಾಷಿಂಗ್ಟನ್ ಪ್ರದೇಶದಲ್ಲಿ ಸಂಜೆ ೫ ಗಂಟೆಯ ನಂತರ ಧಾರಾಕಾರ ಮಳೆ ಆಗುತ್ತಿದೆ. ಪರಿಣಾಮ ಇಲ್ಲಿನ ಜನ ವಿದ್ಯುತ್ ಇಲ್ಲದೇ ಕಾಲ ಕಳೆಯಬೇಕಾಗಿದೆ,ರಾತ್ರಿ ೯ಗಂಟೆವರೆಗೆ ಹೀಗೆ ಮುಂದುವರೆಯಲಿದ್ದು ಹೀಗಾಗಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನಿನ್ನೆ ಮಧ್ಯಾಹ್ನದ ವೇಳೆಗೆ ೧,೩೦೦ ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲ ಸುಮಾರು, ೫,೫೦೦ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ ಎಂದು ಫೈಟ್ ಟ್ರ್ಯಾಕಿಂಗ್ ಸೇವೆ ಫೈಟ್‌ಅವೇರ್ ಸಂಸ್ಥೆ ಹೇಳಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್, ದೇಶದ ಪೂರ್ವ ಕರಾವಳಿಗೆ ಹೋಗುವ ವಿಮಾನ ಹಾರಾಟಗಳನ್ನು ಮರು ಹೊಂದಿಸುವ ಕೆಲಸ ಮಾಡುತ್ತಿದೆ. ಫೀಡೆಲ್ಪಿಯಾ, ವಾಷಿಂಗ್ಟನ್, ಚಾರ್ಲೆಟ್ ಮತ್ತು ಅಟ್ಲಾಂಟಾದಲ್ಲಿ ಮತ್ತು ಹೊರಗೆ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!