ಉದಯವಾಹಿನಿ,ಬೀಜಿಂಗ್:
ಉಕ್ರೇನ್ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ರೂಪಿಸುವ ಉದ್ದೇಶದಿಂದ ಕಳೆದ ವಾರಾಂತ್ಯ ಸೌದಿ ಅರೆಬಿಯಾದ ಜಿದ್ದಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಾತುಕತೆಯು ಒಮ್ಮತವನ್ನು ಕ್ರೋಢೀಕರಿಸಲು ನೆರವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಈ ನಡುವೆ ಜಿದ್ದಾ ಸಭೆಯು ರಷ್ಯಾಗೆ ದೊಡ್ಡ ಹೊಡೆತ ನೀಡಿದೆ ಎಂದು ಉಕ್ರೇನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೀನಾ, ಭಾರತ, ಅಮೆರಿಕ, ಯುರೋಪಿಯನ್ ಯೂನಿಯನ್ ಸೇರಿದಂತೆ ೪೦ಕ್ಕೂ ಅಧಿಕ ದೇಶಗಳು ಜೆದ್ದಾದಲ್ಲಿ ನಡೆದ ಮಾತುಕತೆಯಲ್ಲಿ ಪಾಲ್ಗೊಂಡಿದ್ದವು. ಈ ಸಭೆಗೆ ರಷ್ಯಾಕ್ಕೆ ಆಹ್ವಾನ ಇರಲಿಲ್ಲ. ಸಭೆಯಲ್ಲಿ ಚೀನಾದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಯುರೇಷಿಯನ್ ವ್ಯವಹಾರಗಳ ವಿಶೇಷ ಪ್ರತಿನಿಧಿ ಲಿ ಹುಯಿ ‘ಉಕ್ರೇನ್ ಬಿಕ್ಕಟ್ಟಿನ ಕುರಿತು ಎಲ್ಲಾ ಪ್ರತಿನಿಧಿಗಳೊಂದಿಗೆ ವ್ಯಾಪಕ ಸಂವಹನ ಮತ್ತು ಸಂಪರ್ಕ ಸಾಧಿಸಿದರು ಮತ್ತು ಈ ಮಾತುಕತೆ ಅಂತಾರಾಷ್ಟ್ರೀಯ ಒಮ್ಮತವನ್ನು ಮತ್ತಷ್ಟು ಕ್ರೋಢೀಕರಿಸಿದೆ.
