ಉದಯವಾಹಿನಿ ಹೊಸಕೋಟೆ : ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಓರೋಹಳ್ಳಿ ಗ್ರಾಮ ಪಂಚಾಯಿತಿಯಅಧ್ಯಕ್ಷರಾಗಿ ಹಿಂದುಳಿದ ವರ್ಗ ಎ ಮೀಸಲಾತಿಯ ಸುಷ್ಮಿತಾ ಮಂಜುನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿಯ ತವಟಹಳ್ಳಿಯ ಆರ್. ರಾಮು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.
೨ನೇ ಅವಧಿಗೆ ಜಿಲ್ಲಾಧಿಕಾರಿಗಳ ಅಧಿಸೂಚನೆಯಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟವಾಗಿತ್ತು. ಸದರಿ ಅಧ್ಯಕ್ಷ ಸ್ಥಾನಕ್ಕೆ ಸುಷ್ಮಿತಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನಲೆಯಲ್ಲಿಅವಿರೋಧವಾಗಿ ಅಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ 2 ಪ್ರತಿಸ್ಪರ್ಧಿಗಳು ನಾಮಪತ್ರ ಸಲ್ಲಿಸಿದ್ದರಿಂದ ಅಂತಿಮವಾಗಿ ಚುನಾವಣೆ ನಡೆದು ಕೃಪಾ ಕಿರಣ್ 6 ಮತಗಳನ್ನು ಪಡೆದರೆ, ತವಟಹಳ್ಳಿಯ ಆರ್.ರಾಮು 9 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ನೂತನಉಪಾಧ್ಯಕ್ಷ ತವಟಹಳ್ಳಿ ಆರ್.ರಾಮು ಮಾತನಾಡಿ, ಎಂಟಿಬಿ ನಾಗರಾಜ್‌ರ ಬಿಜೆಪಿ ಬೆಂಬಲಿತರಿಗೆ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ದೊರೆತಿದೆ. 1994 ರಿಂದಲೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸರ್ವಾನುಮತದಿಂದ ಆಯ್ಕೆ ಮಾಡುತ್ತಿದ್ದರು, ಆದರೆ ಇದೇ ಮೊದಲ ಬಾರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇದರಲ್ಲಿ ಬಿಜೆಪಿ ಬೆಂಬಲಿತರಿಗೆ ಜಯ ದೊರೆತಿದೆ ಎ0ದರು.
ಈ ಸಂದರ್ಭದಲ್ಲಿ ಒಬಿಸಿ ಬಿಜೆಪಿ ಜಿಲ್ಲಾಧ್ಯಕ್ಷತ.ರಾ.ವೆಂಕಟೇಶ್, ತಾಪಂ.ಮಾಜಿಅಧ್ಯಕ್ಷ ವಿ.ಸಿ.ಜಯದೇವಯ್ಯ, ಮಾಜಿ ಸದಸ್ಯ ಸೋಲೂರು ಮುನಿರಾಜು, ಮುಖಂಡರಾದ ಅತ್ತಿವಟ್ಟ ಕೆ.ನಾಗೇಶ್, ನಾಗೇಶ್, ಕೇಶವಮೂರ್ತಿ, ದೊಡ್ಡಣ್ಣ, ತಗ್ಗಲಿಹೊಸಹಳ್ಳಿ ಚಂದ್ರು, ಮುನಿಯಪ್ಪ, ಗುತ್ತಿಗೆದಾರ ಇಂಜನಹಳ್ಳಿ ಮಂಜು ಹಾಗೂ ಗ್ರಾಪಂ.ಸದಸ್ಯರುಗಳು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳಿಗೆ ಶುಭಕೋರಿದರು.

Leave a Reply

Your email address will not be published. Required fields are marked *

error: Content is protected !!