ಉದಯವಾಹಿನಿ ದೇವರಹಿಪ್ಪರಗಿ: ತಾಲೂಕಿನ ಕೊಂಡಗೂಳಿ ಗ್ರಾಮದ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರನ್ನು ಬ್ಯಾಲಾಳ ಕುಟುಂಬದವರಿಂದ ಸನ್ಮಾನ ಗೌರವಿಸಲಾಯಿತು.
ತಾಲೂಕಿನ ಅಂಬಳನೂರ ಗ್ರಾಮದಲ್ಲಿ ಕೊಂಡಗೂಳಿ ಮಾಜಿ ಗ್ರಾಪಂ ಅಧ್ಯಕ್ಷರಾದ ಮಡಿವಾಳಪ್ಪ ಬ್ಯಾಲಾಳ ಅವರ ಸ್ವಗ್ರಹದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಅಧ್ಯಕ್ಷರ ಸಮ್ಮುಖದಲ್ಲಿ ಕೆಲಸ ಮಾಡುವ ಮೂಲಕ ಮಾದರಿ ಗ್ರಾಮ ಪಂಚಾಯಿತಿ ಮಾಡೋಣ ಎಂದು ಹೇಳಿದರು. ನಂತರ ಪ್ರಸ್ತಾವಿಕವಾಗಿ ಮಾಜಿ ಜಿಪಂ ಸದಸ್ಯ ಪ್ರಭು ಖಾನಾಪುರ ಮಾತನಾಡಿ ಗ್ರಾಮಗಳ ಅಭಿವೃದ್ಧಿಗೆ ಸರ್ವ ಸದಸ್ಯರು ಹೆಚ್ಚಿನ ಶ್ರಮವಹಿಸಿ ಎಂದು ಶುಭ ಹಾರೈಸಿದರು. ನೂತನ ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರನ್ನು ಯುವ ಮುಖಂಡರಾದ ಆನಂದ ಬ್ಯಾಲಾಳ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಂದ ಎಲ್ಲಾ ಸದಸ್ಯರಿಗೂ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ದಾವಲಬಿ ಹುಸೇನಸಾಬ ಸೋಲಾಪುರ, ಉಪಾಧ್ಯಕ್ಷೆ ಶಿವಲೀಲಾ ಈರಗಂಟೆಪ್ಪ ಕುರುಮಲ್ಲಪ್ಪಗೋಳ, ಮಾಜಿ ತಾಪಂ ಸದಸ್ಯ ದಾವಲ್ ಖಾಜಿ, ಮುಖಂಡರುಗಳಾದ ಈರಣ್ಣ ಗಾಣಿಗೇರ, ಶರಣಗೌಡ ಬಿರಾದಾರ, ರೇಣುಕಾ ಬ್ಯಾಲಾಳ, ಗುರುರಾಜ ಸಜ್ಜನ, ಪಾರ್ವತಿ ಚವ್ಹಾಣ, ಬಸವರಾಜ ಕುಲಕರ್ಣಿ, ನಿಂಗಣ್ಣ ಕಲ್ಲೂರ, ಮಲ್ಲಿಕಾರ್ಜುನ ನಂದ್ಯಾಳ,ದೇವು ಜಾಧವ, ವೀರೇಶ ಚೌದ್ರಿ, ಅಶೋಕ ಹೊಸಮನಿ, ಶಿವಾನಂದ ಬಸವಪಟ್ಟಣ, ಮಾನಪ್ಪ ಹಿರೇಕುರಬರ,ಮೋದಿನ ಲೈನದಾರಿ, ಈರಣ್ಣ ಅಂಗಡಿ, ಲಕ್ಕಪ್ಪ ನಾಯ್ಕೋಡಿ, ಮಲ್ಲು ಅಂಗಡಿ, ದತ್ತು ಬಿರಾದಾರ, ಮಹೇಶ ತಾಳಿಕೋಟಿ, ಮಲ್ಲನಗೌಡ ಬಿರಾದಾರ, ಶಿವು ಕೊಳ್ಳಾರಿ,ಮನೋಹರ ವಾಲಿಕಾರ, ಬಾಬು ಚವ್ಹಾಣ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಗ್ರಾಪಂ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!