ಉದಯವಾಹಿನಿ,ನವದೆಹಲಿ: ಭಾರತ್ ಜೋಡೊ ಯಾತ್ರೆ ಇನ್ನೂ ಮುಗಿದಿಲ್ಲ. ನಾನು ಏನನ್ನು ಇಷ್ಟಪಡುತ್ತಿದ್ದೇನೆ ಮತ್ತು 10 ವರ್ಷಗಳಲ್ಲಿ ನಾನು ಏಕೆ ನಿಂದನೆ ಕೇಳಬೇಕಾಯಿತು ಎಂಬುದನ್ನು ಯಾತ್ರೆ ಆರಂಭವಾದ ಕೆಲ ಸಮಯದಲ್ಲೇ ಅರ್ಥ ಮಾಡಿಕೊಂಡೆ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದ್ದಾರೆ. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, ಸದನದ ಸದಸ್ಯತ್ವವನ್ನು ಮರುಸ್ಥಾಪಿಸಿದಕ್ಕಾಗಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಧನ್ಯವಾದ ಅರ್ಪಿಸಿದರು. ಕಳೆದ ಬಾರಿ ನಾನು ಮಾತನಾಡಿದಾಗ, ನಿಮಗೆ ಬಹಳ ನೋವನ್ನು ಉಂಟುಮಾಡಿದ್ದೆ. ನಾನು ಅದಾನಿ ವಿಷಯದ ಕುರಿತಾಗಿ ತೀವ್ರ ವಾಗ್ದಾಳಿ ನಡೆಸಿದ್ದೆ. ನಿಮ್ಮ ಹಿರಿಯ ನಾಯಕರು ಅತೀವ ನೋವನ್ನು ಅನುಭವಿಸಿದ್ದರು. ಆ ನೋವು ನಿಮ್ಮ ಮೇಲೂ ಪರಿಣಾ
ಮ ಬೀರಿತ್ತು.ಅದಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದು ರಾಹುಲ್ ಗಾಂಧಿ ಹೇಳಿದರು.
