ಉದಯವಾಹಿನಿ,  ಹುಟ್ಟು-ಸಾವು ಎರಡೂ ಅನಿಶ್ಚಿತ. ಸಾವು ಯಾವಾಗ ಬೇಕಾದರೂ ಬರಬಹುದು. ಆದರೆ ಕೆಲವು ಸ್ಥಳಗಳಲ್ಲಿ ಪ್ರತಿಕ್ಷಣವೂ ಸಾವು ಸುಳಿದಾಡುತ್ತಲೇ ಇರುತ್ತದೆ. ಆ ಸ್ಥಳಗಳಿಗೆ ಹೋದರೆ ಯಾವಾಗ ಬೇಕಾದರೂ ನಮ್ಮ ಪ್ರಾಣಪಕ್ಷಿ ಹಾರಿಹೋಗಬಹುದು. ಅಷ್ಟು ಅಪಾಯಕಾರಿ ಜಾಗಗಳಿವು. ಡೆತ್‌ ವ್ಯಾಲಿ ಎಂದೇ ಹೆಸರಾಗಿರುವ ವಿಶ್ವದ ಐದು ಸ್ಥಳಗಳ ಬಗ್ಗೆ ತಿಳಿಯೋಣ.
ಇಥಿಯೋಪಿಯಾ : ಇಥಿಯೋಪಿಯಾದ ಈ ಜಾಗ ವಿಶ್ವದ ಅತ್ಯಂತ ಬಿಸಿಯಾದ ಸ್ಥಳವಾಗಿದೆ. ಇದು ಭೂಮಿಯ ಮೇಲಿನ ಅತ್ಯಂತ ಒಣ ಪ್ರದೇಶವೂ ಹೌದು. ಜ್ವಾಲಾಮುಖಿಯಿಂದ ಹೊರಬರುವ ಲಾವಾರಸ ಮತ್ತು ಬೃಹತ್ ಉಪ್ಪು ನಿಕ್ಷೇಪಗಳು ಅಧಿಕ ಉಷ್ಣಾಂಶಕ್ಕೆ ಕಾರಣ. ಈ ಮಾರಣಾಂತಿಕ ಮರುಭೂಮಿಯು ಒಂದು ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಉಪ್ಪಿನಿಂದ ಆವೃತವಾಗಿದೆ.ಡೆತ್‌ ವ್ಯಾಲಿ : ಡೆತ್ ವ್ಯಾಲಿಯನ್ನು ಅದೇ ಹೆಸರಿನಿಂದಲೇ ಕರೆಯಲಾಗುತ್ತದೆ. ನೆವಾಡಾ ಮತ್ತು ಕ್ಯಾಲಿಫೋರ್ನಿಯಾದ ನಡುವೆ ಇರುವ ಡೆತ್ ವ್ಯಾಲಿ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲೊಂದು. ಇಲ್ಲಿ ದಾಖಲಾದ ಗರಿಷ್ಠ ತಾಪಮಾನ 56.7 ಡಿಗ್ರಿ ಸೆಲ್ಸಿಯಸ್. ಡೆತ್ ವ್ಯಾಲಿಯಲ್ಲಿ 700 ಪೌಂಡ್‌ಗಳಷ್ಟು ತೂಕದ ಬಂಡೆಗಳು ಏಕೆ ತಾನಾಗಿಯೇ ಚಲಿಸುತ್ತವೆ ಎಂಬುದು ಇಂದಿಗೂ ನಿಗೂಢವಾಗಿದೆ.ಉತ್ತರ ಟಾಂಜಾನಿಯಾದ ಉಪ್ಪು ಸರೋವರ : ಈ ಅಪಾಯಕಾರಿ ಉಪ್ಪು ಸರೋವರವು ಪ್ರಾಣಿಗಳನ್ನು ಕಲ್ಲನ್ನಾಗಿ ಮಾಡುತ್ತದೆ. ನಂಬುವುದು ಸುಲಭವಲ್ಲ, ಆದರೆ ಇದು ಸತ್ಯ. ನ್ಯಾಟ್ರಾನ್ ಸರೋವರದ ಹೆಚ್ಚು ಪ್ರತಿಫಲಿತ ಮತ್ತು ರಾಸಾಯನಿಕವಾಗಿ ದಟ್ಟವಾದ ನೀರನ್ನು ಗಾಜಿನ ಬಾಗಿಲು ಎಂದು ಪಕ್ಷಿಗಳು ತಪ್ಪಾಗಿ ಭಾವಿಸುತ್ತವೆ. ಸರೋವರಕ್ಕೆ ಇಳಿದ ತಕ್ಷಣ ಅವುಗಳ ದೇಹವು ಕೆಲವೇ ನಿಮಿಷಗಳಲ್ಲಿ ನಾಶವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!