ಉದಯವಾಹಿನಿ, ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯನದ ಜೈಲರ್ ಚಿತ್ರಮಂದಿರಗಳಲ್ಲಿ ಹಿಟ್ ಆಗಿದೆ. ಮೊದಲ ದಿನವೇ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿ ಕರ್ನಾಟಕದಲ್ಲೂ ಭರ್ಜರಿ ಗಳಿಕೆ ಕಂಡಿದೆ.
ವರದಿ ಪ್ರಕಾರ ’ಜೈಲರ್’ ಮೊದಲ ದಿನವೇ ೫೨ ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಆರಂಭಿಕ ಅಂದಾಜಿನ ಪ್ರಕಾರ, ಮೊದಲ ದಿನವೇ ಚಿತ್ರ ೫೨ ಕೋಟಿ ರೂ. ಇದರಲ್ಲಿ ತಮಿಳುನಾಡಿನಿಂದ ೨೩ ಕೋಟಿ, ಕರ್ನಾಟಕದಿಂದ ೧೧ ಕೋಟಿ. ಕೇರಳದಿಂದ ೫ ಕೋಟಿ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ೧೦ ಕೋಟಿ ರೂ. ಹಾಗೂ ಇತರೆ ರಾಜ್ಯಗಳಿಂದ ೩ ಕೋಟಿ ರೂ. ಬಾಚಿದೆ.
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು, ಈ ಚಿತ್ರದ ಮೂಲಕ ರಜನಿ ಪುನರಾಗಮನ ಮಾಡಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರೀಕ್ಷೆಗೂ ಮೀರಿ ಜನ ಸಿನಿಮಾ ವೀಕ್ಷಣೆ ಮಾಡಿ ಬೆಂಬಲಿಸಿದ್ದಾರೆ. ಮೊದಲ ದಿನ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ವಿಶ್ವಾದ್ಯಂತ ೭೦೦೦ ಸ್ಟೀನ್‌ಗಳ ಪ್ರಾರಂಭದೊಂದಿಗೆ ಗಳಿಕೆ ವಿಷಯದಲ್ಲಿ ದಾಖಲೆ-ಮುರಿಯುವ ಓಟವು ಮುಂದುವರಿಯುತ್ತದೆ. ಜೈಲರ್ ೨೦೨೩ ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ತಮಿಳು ಚಿತ್ರವಾಗಿದೆ.
‘ಜೈಲರ್’ ಸಿನಿಮಾ ಬಿಡುಗಡೆಯಾದ ದಿನವೇ ಹಲವು ಗಮನಾರ್ಹ ದಾಖಲೆಗಳನ್ನು ಮಾಡಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಉತ್ತಮ ಓಪನಿಂಗ್ ಪಡೆಯಿತು. ತಮಿಳು ಚಿತ್ರವೊಂದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಉತ್ತಮ ಮೊದಲ ದಿನದ ಕಲೆಕ್ಷನ್ ಮಾಡಿದೆ. ಈ ವರ್ಷ ತಮಿಳು ಚಿತ್ರ ’ಜೈಲರ್’ ಭಾರತದಾದ್ಯಂತ ದೊಡ್ಡ ಬಿಡುಗಡೆಯೊಂದಿಗೆ ದಾಖಲೆಯ ಮೊದಲ ದಿನ ಗಳಿಕೆಯಾಗಿದೆ
