
ಉದಯವಾಹಿನಿ , ದೇವದುರ್ಗ: ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಬಹಳ ಮುಖ್ಯವಾಗಿದೆ. ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಶಿವುಕುಮಾರ ಹೇಳಿದರು. ಪಟ್ಟಣದ ಮುರಿಗೆಪ್ಪ ಖೇಣೇದ್ ಫಂಕ್ಷನ್ ಹಾಲ್‍ನಲ್ಲಿ ಲಿಂಗಸೂಗೂರ ಪೊಲೀಸ್ ಉಪ-ವಿಭಾಗ ಹಾಗೂ ದೇವದುರ್ಗ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ, ಯುವಕರ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾದಕ ವಸ್ತುಗಳಿಂದಾಗುವ ಅನಾಹುತಗಳ ಬಗ್ಗೆ ತಡೆಗಟ್ಟಬೇಕು. ವಿದ್ಯಾರ್ಥಿಗಳು ಇಂತಹ ಕೆಟ್ಟ ಅಭ್ಯಾಸದಿಂದ ದೂರವಿದ್ದು, ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒತ್ತು ನೀಡಬೇಕು. ಅಪರಾಧಗಳನ್ನು ತಡೆಗಟ್ಟಲು ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು. ಪೋಕ್ಸ್‍ಯಾಕ್ಟ್, ಮಾನವ ಕಳ್ಳ ಸಾಗಾಣಿಕೆ, ರಸ್ತೆ ಅಪಘಾತಗಳನ್ನು ತಡೆಗಟ್ಟುವ ಕುರಿತು ವಿದ್ಯಾರ್ಥಿಗಳಿಗೆ ಕಾನೂನು ಪಾಠ ಹೇಳಿದರು. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ ತಡೆಗಟ್ಟಲು ಯುವ ವಿದ್ಯಾರ್ಥಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು. ಕಾನೂನು ಮೀರಿ ನಡೆಯುವಂತ ಅಪರಾಧಗಳನ್ನು ತಡೆಯಲು ಪೊಲೀಸ್ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದರು. ಕಳ್ಳ ಸಾಗಾಣಿಕೆ ಕುರಿತು ಪ್ರತಿಯೊಬ್ಬರ ಮನೆಯ ಮುಂದೆ ಸಿಸಿಕ್ಯಾಮರಾ ಅಳವಡಿಸಿಕೊಳ್ಳಬೇಕು. ಮನೆ ಬಿಟ್ಟು ಪರಸ್ಥಳಕ್ಕೆ ಹೋಗುವಾಗ ಸಂಬಂಧಪಟ್ಟಂತ ಠಾಣೆ ಅಧಿಕಾರಿಗಳಿಗೆ ಪೂರಕ ಮಾಹಿತಿ ನೀಡಬೇಕು. ಪ್ರತಿಯೊಬ್ಬರು ಕಾನೂನಿನ ಚೌಕ್‍ಟಿನಲ್ಲಿ ಕಾನೂನು ರಕ್ಷಣೆ ಮಾಡುವ ಕಡೆ ಒತ್ತು ನೀಡಬೇಕು. ಮಂಗಳೂರು, ಉಡುಪಿ ಸೇರಿದಂತೆ ಕರವಳಿ ಭಾಗದಲ್ಲಿ ವಿದ್ಯಾರ್ಥಿಗಳು ಓದುವಿನ ಕಡೆ ಹೆಚ್ಚು ಒತ್ತು ಕೊಟ್ಟುತ್ತಿದ್ದರಿಂದ ಉತ್ತಮ ಫಲಿತಾಂಶ ಬರುತ್ತಿದೆ. ಹೀಗಾಗಿ ಈಭಾಗದ ವಿದ್ಯಾರ್ಥಿಗಳ ಕೊಡ ಓದುವಿನ ಕಡೆ ಹೆಚ್ಚಿನ ಒಲವು ಕೊಡುವುದ್ದರಿಂದ ಉತ್ತಮ ಫಲಿತಾಂಶ ಬರಲಿದೆ ಎಂದು ಹೇಳಿದರು. ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಲು ಪರಿಶ್ರಮಿಸಬೇಕು. ಉನ್ನತ ಹುದ್ದೆಯಲ್ಲಿದಾಗಲೇ ಸಮುದಾಯಗಳು ಅಭಿವೃದ್ಧಿ ಹೊಂದಲು ಸಾದ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪಿಐ ಹೊಸಕೇರಪ್ಪ, ಪಿಎಸ್‍ಐ ಕರೆಮ್ಮ, ಉಪನ್ಯಾಸಕರಾದ ಲಕ್ಷ್ಮಣ, ಮಲ್ಲಿಕಾರ್ಜುನ ಮಸರಕಲ್, ರವಿಕುಮಾರ, ವಿನೋದ ಸೇರಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದರು.
