
ಉದಯವಾಹಿನಿ ಸಿಂದಗಿ: ತಾಲೂಕ ಹಾಗೂ ಸಿಂದಗಿ ಪಟ್ಟದ ವ್ಯಾಪ್ತಿಯಲ್ಲಿರುವಂತ ದೇವಸ್ಥಾನ, ಮಠ, ಮಸೀದಿ ಹಾಗೂ ಮಂದಿರಗಳ ಸ್ವಚ್ಛತಾ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಭಿಯಾನವನ್ನು ಹಮ್ಮಿಕೊಂಡಿದ್ದರು .
ಇದೇ ತಿಂಗಳ ಅಗಸ್ಟ್ -5ರಿಂದ15ವರೆಗೆ ತಾಲೂಕಿನ 200 ದೇವಾಲಗಳ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಶ್ರದ್ದಾ ಕೇಂದ್ರಗಳ ಸ್ವಚ್ಛತೆ ಕಾರ್ಯಕ್ರಮವನ್ನು ಮಾಡಿದ್ದು ಸಿಂದಗಿ ಪಟ್ಟಣದ ವಿದ್ಯಾನಗರ ಇಷ್ಟ ಲಿಂಗ ದೇವಸ್ಥಾನ.. ಕಾಳಿಕಾ ನಗರದ ಸಿದ್ಧಿ ವಿನಾಯಕ ದೇವಸ್ಥಾನ.. ಮದೀನಾ ನಗರದ ಯಲ್ಲಮ್ಮ ದೇವಿ ದೇವಸ್ಥಾನ.ಶ್ರೀ ಲಕ್ಷ್ಮಿ ದೇವಸ್ಥಾನ ಕಲ್ಯಾಣ ನಗರದ ನಿಜಂ ಬಾಬಾ ಮಸೀದಿ.ಕಾಳಿಕಾ ದೇವಸ್ಥಾನ. ಅಂಬಾಭವಾನಿ ದೇವಸ್ಥಾನ ನಾಲೆವರ ಮಠ ಹೀಗೆ 15 ಕ್ಕೂ ಹೆಚ್ಚು ನಮಸ್ಕಾರಗಳು ಸ್ವಚ್ಛತೆ ಮಾಡಿದ್ದು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶಯದಂತೆ ಕರ್ನಾಟಕ ರಾಜ್ಯದ್ಯಂತ ಸ್ವಸಹಾಯ ಸಂಘದ ಸದಸ್ಯರಿಂದ ದೇವಸ್ಥಾನದ ಕಮಿಟಿ ಊರಿನ ಗಣ್ಯರ ಸಮ್ಮುಖದಲ್ಲಿ ಸ್ವಚ್ಛತಾ ಅಭಿಯಾನವನ್ನು ಮಾಡಲಾಗುತ್ತಿದ್ದು ಸಿಂದಗಿ ತಾಲೂಕಿನಲ್ಲೂ ಪ್ರತಿ ವರ್ಷ ಜನೆವರಿ-ಆಗಸ್ಟ್ ತಿಂಗಳಲ್ಲಿ ಈ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
