
ಉದಯವಾಹಿನಿ ದೇವಲಾಪುರ: ಸಮೀಪದ ದೇವರ ಮಲ್ಲನಾಯಕನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ತೆರವಾದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ರಾಗಿ ಕೊಂಬಿನ ಕೊಪ್ಪಲು ಶೃತಿ. ಉಪಾಧ್ಯಕ್ಷರಾಗಿ ದೇವರ ಮಾದಹಳ್ಳಿ ಸುರೇಶ್ ರವರು ಆಯ್ಕೆಯಾದರು.ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೂ ಹೃದಯ ಪೂರ್ವಕ ಧನ್ಯವಾದಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಸಮಗ್ರ ಅಭಿವೃದ್ಧಿಗೆ ಸದಸ್ಯರ ಸಹಕಾರ ಮತ್ತು ಸಲಹೆ ಪಡೆದು ಶ್ರಮೀಸುತ್ತೇನೆ ಎಂದು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಶ್ರುತಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ. ನಿತೀಶ್ ಶ್ರೀನಿವಾಸ್ ಹಾಗೂ ಡೈಮಂಡ್ ನರಸಿಂಹಮೂರ್ತಿ ರಾಜಣ್ಣ ಅನೇಕ ಮುಖಂಡರು ಹಾಜರಿದ್ದರು.
