ಉದಯವಾಹಿನಿ  ಕೆಂಭಾವಿ: ನಾರಾಯಣಪುರ ಜಲಾಶಯದ ಪ್ರದೇಶದಲ್ಲಿ ಮತ್ತು ಸಾಲವಡಗಿ ಕ್ರಾಸ್ ಬಳಿ ನಡೆಯುತ್ತಿರುವ  ಬೂದಿಹಾಳ-ಪೀರಾಪುರ ಏತ ನೀರಾವರಿ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುರಪುರ ಮತ್ತು ಶಹಾಪುರ ಮತಕ್ಷೇತ್ರದ ಹಲವು ರೈತರಿಗೆ  ಬೂದಿಹಾಳ-ಪೀರಾಪುರ ಯೋಜನೆ ನೆರವಾಗಲಿದ್ದು, ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಗುಣಮಟ್ಟದಿಂದ ನಿರ್ಮಾಣ ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು. ಈಗಾಗಲೇ ಈ ಕಾಮಗಾರಿ ತಾಳಿಕೋಟಿ ತಾಲೂಕಿನ ಸಾಲವಡಗಿ ಕ್ರಾಸ್‌ವರೆಗೆ ಬಂದಿದ್ದು, ಇನ್ನಾರು ತಿಂಗಳೊಳಗೆ ರೈತರ ಜಮೀನುಗಳಿಗೆ ನೀರು ತಲುಪಿಲಿದೆ ಎಂದವರು, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ನೀರು ಪೋಲಾಗುವುದನ್ನು ತಡೆಗಟ್ಟುವ ಸಲುವಾಗಿ ಇದನ್ನು ರೂಪಿಸಲಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಇದರಿಂದ ೨೦ ಸಾವಿರ ಹೇಕ್ಟರ್ ಪ್ರದೇಶ ನೀರಾವರಿಯಾಗಲಿದ್ದು, ನಮ್ಮ ಜಿಲ್ಲೆಯ  ಸುರಪುರ ತಾಲೂಕಿನ ಬರಪೀಡಿತ ಹಳ್ಳಿಗಳ ೧೭ ಸಾವಿರ ಹೇಕ್ಟರ್ ಪ್ರದೇಶಕ್ಕೆ ನೀರುಣಿಸಲು ಸಹಾಯಕವಾಗಲಿದೆ ಎಂದರು. ಈ ಯೋಜನೆ೨ ಹಂತದಲ್ಲಿದ್ದು, ಮೊದಲ ಹಂತದ ಪ್ರಾಯೋಗಿಕವಾಗಿ ಈಗಾಗಲೇ ನಾರಯಣಪುರ ಜಲಾಶಯದಿಂದ ನೀರನ್ನು ಹರಿಬಿಟ್ಟು ಪರೀಕ್ಷಿಸಲಾಗಿದ್ದು, ಸಫಲತೆ ಕಂಡಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಚನ್ನಾರೆಡ್ಡಿ ಪಾಟೀಲ ತುನ್ನೂರ, ಡಿಸಿ ಡಾ.ಸುಶೀಲಾ.ಬಿ, ಮುಖ್ಯ ಇಂಜನೀಯರ್ ಆರ್.ಮಂಜುನಾಥ, ಪ್ರಕಾಶ ಮುದಗಲ್, ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ,ಸಿದ್ದನಗೌಡ ಪೋ.ಪಾಟೀಲ, ಬಸನಗೌಡ ಹೊಸಮನಿ, ಬಿ.ಎಸ್.ಯಾಳಗಿ ಸೇರಿ ಹಲವರಿದ್ದರು.

Leave a Reply

Your email address will not be published. Required fields are marked *

error: Content is protected !!