ಉದಯವಾಹಿನಿ  ಹೊಸಕೋಟೆ :  ತಾಲೂಕಿನ ತಾವರೆಕೆರೆಗ್ರಾಮ ಪಂಚಾಯಿತಿಯ ೨ನೇ ಅವಧಿಗೆ ನೂತನ ಅಧ್ಯಕ್ಷರಾಗಿ ತಾವರೆಕೆರೆಯ ಅಧ್ಯಕ್ಷರಾಗಿ ರಮೇಶ್, ಉಪಾಧ್ಯಕ್ಷರಾಗಿ ಯಳಚಹಳ್ಳಿಯ ಅಸ್ಮಾತಾಜ್‌ಜಿಯಾವುಲ್ಲಾಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಂ. ಪುಷ್ಪ ತಿಳಿಸಿದ್ದಾರೆ.
೨ನೇ ಅವಧಿಯಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ಸ್ಥಾನ ನಿಗದಿಯಾಗಿತ್ತು.ಎಲ್ಲ ಸದಸ್ಯರು ಪರಸ್ಪರ ಒಮ್ಮತದಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಅಯ್ಕೆಯಾಗಿದ್ದಾರೆಂದು ಘೋಷಿಸಿದರು.
ತಾಪಂನ ಮಾಜಿ ಅಧ್ಯಕ್ಷ ಟಿ.ಎಸ್. ರಾಜಶೇಖರ್ ಮಾತನಾಡಿ, ಸರಕಾರದಿಂದ ಸಿಗುವ ಎಲ್ಲ ಅನುದಾನಗಳನ್ನು ಸಮರ್ಪಕವಾಗಿ ಬಳೆಸಿಕೊಂಡು, ಗ್ರಾಪಂ. ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಬೇಕು.ಪಕ್ಷಾತೀತವಾಗಿ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮಾಣೀಕವಾಗಿ ಶ್ರಮಿಸುವಂತಾಗಬೇಕು ಎ0ದು ಸಲಹೆ ನೀಡಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಂಸದ ಬಿ.ಎನ್. ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡ, ಉದ್ಯಮಿ ಬೈರೇಗೌಡ, ರಾಜ್ಯಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ. ರಾಜಶೇಖರಗೌಡ, ತಾಪಂ.ಮಾತ0ಗ ಪೌಂಡೇಷನ್‌ ರಾಜ್ಯ ಉಪಾಧ್ಯಕ್ಷ ಡಾ. ಹೆಚ್.ಎನ್. ಸುಬ್ಬರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ದೇವರಾಜ್‌ ಶುಭ ಕೋರಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪ0ನ ಮಾಜಿ ಅಧ್ಯಕ್ಷರಾದ ಎಸ್.ಎಸ್.ಟಿ ಮಂಜುನಾಥ್, ಆರ್.ರವಿಕುಮಾರ್ ಬಸವಪ್ರಕಾಶ್, ದಯಾನಂದಬಾಬು, ಮಾಜಿ ಉಪಾಧ್ಯಕ್ಷ ಸುಧಾಕರ್, ಪಿಡಿಒ ಮುನಿಗಂಗಯ್ಯ, ಗ್ರಾಪಂ. ಸದಸ್ಯರಾದ ಬಿ.ಜಗದೀಶ್, ಭವ್ಯ ಮಂಜುನಾಥ್, ಪವಿತ್ರಾ ಮಂಜುನಾಥ್, ರೂಪ ನಾಗೇಶ್, ಮಂಜುಳ ನಾಗೇಶ್, ಲಕ್ಷö್ಮಮ್ಮ ಹನುಮಂತಪ್ಪ, ಕೃಷ್ಣಪ್ಪ, ಪ್ರಿಯಾಂಕರಮೇಶ್, ಅಶ್ವಿನಿ ದೇವರಾಜ್, ನಿತಿನ್‌ಕುಮಾರ್. ಕರವಸೂಲಿಗಾರ ರಾಜಣ್ಣ ಹಾಗೂ ಕಾಂಗ್ರೆಸ್‌ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!