ಉದಯವಾಹಿನಿ ಜೇವರ್ಗಿ: ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಎನ್.ಎಸ್.ಎಸ್ ಘಟಕದ ವತಿಯಿಂದ ಶನಿವಾರ ಕಾಲೇಜು, ಪ್ರೌಢಶಾಲೆ, ಮೌಲಾನಾಆಜಾದ್ ಪ್ರೌಢಶಾಲೆ ಮತ್ತುಕನ್ಯಾ ಪ್ರೌಢಶಾಲೆಯಆವರಣದಲ್ಲಿ ಸಾಕಷ್ಟು ಗಿಡಗಳನ್ನು ನೆಡುವುದುರ ಮೂಲಕ ವನಮಹೋತ್ಸವಆಚರಿಸಲಾಯಿತು.
ಚಾಲನೆ ನೀಡಿ ಮಾತನಾಡಿದ ಪ್ರಾಚಾರ್ಯ ಮಹಮ್ಮದ್‌ಅಲ್ಲಾಉದ್ದೀನ್ ಸಾಗರ, ನಮ್ಮ ಭಾಗದಲ್ಲಿ ಭೂಮಿಯ ಉಷಾಂಶ ಪ್ರಮಾಣ ಹೆಚ್ಚಾಗಿರುವುದುರಿಂದ ಭೂಮಿಯಲ್ಲಿನ ತೇವಾ0ಶ ಪ್ರಮಾಣ ಕಡಿಮೆಯಿದೆ. ಆದ್ದರಿಂದಗಿಡ-ಮರಗಳು ನೀರಿನಕೊರತೆಯಿಂದಒಣಗುವಸAಭವವಿರುವದರಿAದಗಿಡಗಳನ್ನು ನೆಡುವುದರಜೊತೆಗೆ ಆಗಾಗ್ಗೆ ಅವುಗಳಿಗೆ ನೀರುಣಿಸುವ ಮೂಲಕ ಸಂರಕ್ಷಿಸಬೇಕಾಗಿದೆ ಎ0ದು ಹೇಳಿದರು.
ಎನ್.ಎಸ್.ಎಸ್‌ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಅರಣ್ಯಗಳ ಪ್ರಮಾಣ ಕಡಿಮೆಯಾಗಿ ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗದೆ ಪರಿಸರದಲ್ಲಿಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಪ್ರತಿಯೊಂದು ಜೀವರಾಶಿ ಉಳಿಯಬೇಕಾದರೆ ಪರಿಸರದ ಸಂರಕ್ಷಣೆಅಗತ್ಯ.ಅಭಿವೃದ್ಧಿ ಹೊಂದಿದ ರಾಷ್ಟçಗಳಲ್ಲಿ ಅರಣ್ಯಗಳ ಪ್ರಮಾಣ ಹೆಚ್ಚಾಗಿದೆಎಂದರೆ, ಅಭಿವೃದ್ಧಿ ಮತ್ತುಅರಣ್ಯಗಳ ಪ್ರಮಾಣಕ್ಕೂ ನೇರವಾದ ಸಂಬ0ಧವಿದೆ ಎ0ದರ್ಥವಾಗಿದೆ. ಅರಣ್ಯಗಳಿಂದ ಸಾಕಷ್ಟು ಪ್ರಯೋಜನೆಗಳಿವೆ. ನಮ್ಮ ಜಿಲ್ಲೆಯಲ್ಲಿರುವ ಅರಣ್ಯದ ಪ್ರಮಾಣದ ಹೆಚ್ಚಾಗಬೇಕಾದರೆ, ಎಲ್ಲೆಡೆ ವ್ಯಾಪಕವಾಗಿ ಗಿಡ ನೆಟ್ಟು ಪೋಷಿಸುವ ಕಾರ್ಯವಾಗ ಬೇಕಾಗಿದೆ ಎಂದರು. ಕಾಲೇಜಿನ ಉಪನ್ಯಾಸಕರಾದ ರವೀ0ದ್ರಕುಮಾರ ಬಟಗೇರಿ, ನಯಿಮಾ ನಾಹಿದ್, ರೇಣುಕಾಚಿಕ್ಕಮೇಟಿ, ಜಮೀಲ್‌ಅಹಮ್ಮದ್, ರಂಜಿತಾಠಾಕೂರ್, ಸಮೀನಾ ಬೇಗಂ, ನಾಗಮ್ಮ, ಸಾಹೇಬಗೌಡ ಪಾಟೀಲ, ಪ್ರ.ದ.ಸ ನೇಸರ ಎಂ.ಬೀಳಗಿಮಠಹಾಗೂ ಸ್ವಯಂ ಸೇವಕರು ಭಾಗವಹಿಸಿದ್ದರು.
