
ಉದಯವಾಹಿನಿ ಪೀಣ್ಯ ದಾಸರಹಳ್ಳಿ : ಚೆನ್ನೈಯಲ್ಲಿ ನಡೆದ17 ವರ್ಷ ಒಳಗಿನವರ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿಯನ್ನು ಚೆನ್ನೈಯಲ್ಲಿ ರಾಜ್ಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಯೋಜಿಸಲಾದ ಕ್ರಿಕೆಟ್ ಟೂರ್ನಿಯಲ್ಲಿ ಅಂತಿಮ ದಿನ ನಡೆದ ಫೈನಲ್ ಹಣಹಣಿಯಲ್ಲಿ ಕ್ರಿಕೆಟ್ ಫೆಡರೇಷನ್ ಆಪ್ ಬೆಂಗಳೂರು ತಂಡವು ಕ್ರಿಕೆಟ್ ಫೆಡರೇಷನ್ ಆಫ್ ಇಂಡಿಯಾ ತಂಡವನ್ನು 11 ರನ್ಗಳ ಅಂತರದಿಂದ ಸೋಲಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಅವಕಾಶ ಸಿಕ್ಕರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸೂಕ್ತ ಉದಾಹರಣೆ ಶವಿನ್ ವಿ. ಒಟ್ಟು 10 ರಾಜ್ಯಗಳು ಮತ್ತು ಎರಡು ಅಂತರಾಷ್ಟ್ರೀಯ ತಂಡಗಳಾದ. ಯುಎಇ ಮತ್ತು ಮಲೇಶಿಯಾ ತಂಡಗಳು ಪ್ರತಿನಿಧಿಸಿದ ಟೂರ್ನಿಯಲ್ಲಿ ಕ್ರಿಕೆಟ್ ಫೆಡರೇಶನ್ ಆಫ್ ಇಂಡಿಯಾ ತಂಡವನ್ನು ಮಣಿಸಿ ಕ್ರಿಕೆಟ್ ಫೆಡರೇಷನ್ ಆಫ್ ಬೆಂಗಳೂರು ತಂಡವು ವಿಜಯದ ನಗೆ ಬೀರಿ ಇತಿಹಾಸ ಬರೆಯಿತು ಮೊದಲು ಬ್ಯಾಟ್ ಮಾಡಿದ ಕ್ರಿಕೆಟ್ ಫೆಡರೇಷನ್ ಆಫ್ ಬೆಂಗಳೂರು ತಂಡ ಬ್ಯಾಟಿಂಗ್ ಆಯ್ಕೆಮಾಡಿಕೊಂಡು ಉತ್ತಮ ಆರಂಭ ಸಾಧಿಸುತಿದ್ದ ಸಂದರ್ಭದಲ್ಲಿ ರಿತಿನ್ ಮತ್ತು ಜಯಚಂದ್ರ ರವರ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು ಆಗ ಆಪತ್ಬಾಂಧವನಂತೆ ಆಟವಾಡಿದ ಕನ್ನಡ ಕಟ್ಟಾಳುಗಳಾದ ಶವಿನ್ ವಿ, ಆಕಾಶ್ ಎಂ ಗೌಡ ಸೇರಿದಂತೆ ಇತರರು ತಾಳ್ಮೆಯಿಂದ ಸುದೀರ್ಘ ಇನಿಂಗ್ಸ್ ಅನ್ನು ಕಟ್ಟಿ ತಂಡದ ಬೃಹತ್ ಮೊತ್ತ ದಾಖಲಿಸಲು ನೆರವಾದರೂ ಆರಂಭದಿಂದಲೂ ಎದುರಾಳಿ ತಂಡದ ಬೌಲರ್ಗಳನ್ನು ಚಾಕ ಚಕ್ಯತೆಯಿಂದ ಮನ ಬಂದಂತೆ ದಂಡಿಸಿದ ಯುವ ಬ್ಯಾಟ್ಸ್ಮನ್ ಶವಿನ್ ವಿ 62 ಎಸೆತಗಳನ್ನು ಎದುರಿಸಿ 11 ಆಕರ್ಷಕ ಬೌಂಡರಿ ಮತ್ತು ಒಂದು ಅದ್ಭುತ ಸಿಕ್ಸರ್ ಒಳಗೊಂಡ 83 ರನ್ಗಳನ್ನು ಗಳಿಸಿ ತಮ್ಮ ಆಕರ್ಷಕ ಅರ್ಧಶತಕನ್ನು ಪೂರೈಸಿ ತಂಡದ ಮೊತ್ತ 150ರ ಗಡಿ ದಾಟಲು ತಂಡಕ್ಕೆ ಬೆನ್ನೆಲುಬಾಗಿ ನಿಂತರು ಇದನ್ನ ಬೆನ್ನಟ್ಟಿದ ಕ್ರಿಕೆಟ್ ಫೆಡರೇಷನ್ ಆಫ್ ಇಂಡಿಯಾ ತಂಡವು 151ರ ಬದಲಾಗಿ ನಿಗದಿತ 25 ಓವರ್ಗಳಲ್ಲಿ ಕೇವಲ 140 ರನ್ ಗಳಿಸಲು ಶಕ್ತವಾಯಿತು ಇದರೊಂದಿಗೆ ಕ್ರಿಕೆಟ್ ಫೆಡರೇಷನ್ ಆಫ್ ಬೆಂಗಳೂರು 11 ರನ್ಗಳ ಗೆಲುವನ್ನು ದಾಖಲಿಸಿತು ಈ ಗೆಲುವಿನ ನಂತರ ತಂಡಕ್ಕೆ ಆಸರೆಯಾಗಿ ನಿಂತು 83 ರನ್ಗಳಿಸಿ ಗೆಲುವಿನ ಪ್ರಮುಖ ಪಾತ್ರವಹಿಸಿದ ಶವಿನ್ ವಿ ಗೆ ಸೇರಿದಂತೆ ಆಟಗಾರರು ಅಭಿನಂದಿಸಿದರು ಇದರೊಂದಿಗೆ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶವಿನ್ ವಿ ಮತ್ತು ಆಕಾಶ್ ಎಂ ಗೌಡ, ರತಿನ್ ಸಂಜಾ,ಜಯಚಂದ್ರು, ಶ್ರೀವತ್ಸಾನ್ ವಿನಯ್, ತೇಜಸ್ ಗೌಡ, ಶ್ರೀ ಕ್ರಿಶ್, ರಾಯನ್ ಪಿ , ಎನ್,ಎ ಜಿ ಗುರು,ಶ್ರೀನಿವಾಸ್ ಗೌಡ. ಈ ಎಲ್ಲಾ ಆಟಗಾರರ ಉತ್ತಮ ಪ್ರದರ್ಶನ ನೀಡಿ ಫೈನಲ್ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲಾ ಆಟಗಾರರ ರೋಚಕ ಆಟ ಶ್ಲಾಘನೀಯ ಮತ್ತು ರಾಜ್ಯವೇ ಹೆಮ್ಮೆಪಡುವ ಸಾಧನೆ ಮಾಡಿದ್ದು ಮುಂದಿನ ದಿನಗಳಲ್ಲಿ ಈ ಆಟಗಾರರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗಲೆಂದು ತುಂಬು ಹೃದಯದಿಂದ ಹಾರೈಸಿ ಪೋಷಕರ ಪ್ರತಿನಿಧಿ ಮಂಡ್ಯ ಮಲ್ಲೇಶ್ ಬೆಂಗಳೂರುದಲ್ಲಿ ಉದಯ ವಾಹಿನಿ ಪತ್ರಿಕಾ ಪ್ರಕಟಣೆಯ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.
