
ಉದಯವಾಹಿನಿ ಪೀಣ್ಯ ದಾಸರಹಳ್ಳಿ : ಕ್ಷೇತ್ರದ ಸುಂಕದಕಟ್ಟೆ ವಾರ್ಡಿನ ಶ್ರೀನಿವಾಸನಗರದ ಶ್ರೀಗಂಧಕಾವಲ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕ್ಷೇತ್ರದ ಶಾಸಕ ಎಸ್ ಮುನಿರಾಜು ರಿಬ್ಬನ್ ಕತ್ತರಿ ಉದ್ಘಾಟಿಸಿದರು. ನಂತರ ಅವರು ಸಾರ್ವಜನಿಕರಿಗಾಗಿ ನೀರಿನ ಘಟಕ ನಿರ್ಮಿಸಿದ್ದು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಶಾಸಕ ಎಸ್ ಮುನಿರಾಜು ಶುಭ ಕೋರಿ ಮಾತಾಡಿದರು.ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್ ಎನ್ ಗಂಗಾಧರ್, ಡಾ.ನಾಗೇಶ್ ಕುಮಾರ್, ದೊಡ್ಡಬಿದರಿಕಲ್ ವಾರ್ಡಿನ ಬಿಜೆಪಿ ಉಪಾಧ್ಯಕ್ಷ ಅರುಣ್ ಬೈಲಪ್ಪ, ಬಿಜೆಪಿ ಹಿರಿಯ ಮುಖಂಡ ರಾಮೇಗೌಡ, ತಿಮ್ಮೇಗೌಡ, ಶ್ರೀನಿವಾಸ್, ರಾಮು, ಮುನಿರಾಜು, ಸೇರಿದಂತೆ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
