
ಉದಯವಾಹಿನಿ ನಾಗಮಂಗಲ: ತಾಲೂಕಿನ ಬೆಳ್ಳೂರು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಂಜಯ್ ಅವರಿಗೆ ಸೇರಿದ ವಿಲ್ ಕಾರ್ಟ್ ಗೋಡೌನ್ ರೋಲಿಂಗ್ ಶಟರ್ ಅನ್ನು ದಿನಾಂಕ: 31/07/2023 ರಂದು ಕಳ್ಳರು ಯಾವುದೋ ಆಯುಧ ದಿಂದ ಮೀಟಿ ಒಳಗೆ ಹೋಗಿ ಬೀರುವಿನಲ್ಲಿಟ್ಟಿದ್ದ 7,25,954 ರೂ ಹಣದ ಜೊತೆಗೆ ಒಂದು ಸಿಪಿಯು, ಒಂದು ಮಾನಿಟರ್, ಒಂದು ಲ್ಯಾಪ್ ಟಾಪ್ ಸೇರಿದಂತೆ ಕಳುವು ಮಾಡಿಕೊಂಡು ಹೋಗಿದ್ದರು.ಹಣ ಸೇರಿದಂತೆ ಇವುಗಳ ಒಟ್ಟು ಮೌಲ್ಯ 7,68,954 ರೂಪಾಯಿಗಳು ಎಂದು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಮಾಲೀಕರು ದೂರನ್ನು ದಾಖಲಿಸಿದರು.
ಸಂಜಯ್ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 153/2023 ಕಲಂ 457,380 ರೀತ್ಯ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿ ಪತ್ತೆಗಾಗಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್ ಯತೀಶ್, ಅಪಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಇ ತಿಮ್ಮಯ್ಯ, ನಾಗಮಂಗಲ ಡಿ.ವೈ. ಎಸ್.ಪಿ ಲಕ್ಷ್ಮೀನಾರಾಯಣ ಪ್ರಸಾದ್, ಪೋಲಿಸ್ ವೃತ್ತ ನಿರೀಕ್ಷಕ ಕೆ.ಎಸ್ ನಿರಂಜನ್ ಸೇರಿ ತಂಡವನ್ನು ರಚಿಸಲಾಗಿತ್ತು.ಪಾಂಡವಪುರ ತಾಲೂಕಿನ ಮೇಲುಕೋಟೆ ಸಮೀಪದ ಹೊಸಕೋಟೆ ಗ್ರಾಮದ ದರ್ಶನ್.ಎಂ (28) ಎಂಬಾತನೇ ಬಂದಿತ ಆರೋಪಿ ಈತ ಬೆಳ್ಳೂರು ಪಟ್ಟಣದಲ್ಲಿರುವ ವೀಲ್ ಕಾರ್ಡ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ, ಈ ಸಂಬಂಧ ಮಂಡ್ಯ ಜಿಲ್ಲಾ ಅಪಾರ ಪೊಲೀಸ್ ಅಧ್ಯಕ್ಷರಾದ ಸಿಇ ತಿಮ್ಮಯ್ಯನವರ ಮಾರ್ಗದರ್ಶನದಲ್ಲಿ ಬೆಳ್ಳೂರು ಪಿಎಸ್ಐ ಬಸವರಾಜ ಚಿಂಚೋಳಿ, ಪಿಎಸ್ಐ ಲೋಕೇಶ್, ಪಿಎಸ್ಐ ಅನ್ನಪೂರ್ಣ, ಕಾನ್ಸ್ಟೇಬಲ್ ಗಳಾದ ಕೆ.ವಿ ಪ್ರಶಾಂತ್ ಕುಮಾರ್(ಸಿಹೆಚ್ ಸಿ 153) ಎಸ್. ಆರ್ ಉಮೇಶ್ (ಸಿ ಎಚ್ ಸಿ 154) ಡಿ.ಕೆ ಕಿರಣ್ ಕುಮಾರ್ (ಸಿ ಎಚ್ ಸಿ 59) ಎಂ.ಡಿ ಲೋಕೇಶ್ (ಸಿಪಿಸಿ 384) ಬಸವರಾಜು (ಸಿಪಿಸಿ 424) ಶಂಕರ್ ನಾಯಕ್ (ಸಿಪಿಸಿ 516) ಒಳಗೊಂಡಂತೆ ತಂಡ ರಚನೆ ಮಾಡಲಾಗಿತ್ತು.
ಈ ತಂಡ 10/08/202 3 ರಂದು ಬೆಳ್ಳೂರ್ ಟೌನಿನ ವಿಲ್ ಕಾರ್ಟ್ ನಲ್ಲಿ ಉದ್ಯೋಗಿಯಾಗಿದ್ದ ದರ್ಶನ್ ಎಂ ಎಂಬುವನನ್ನು ಕೇವಲ 10 ದಿನದೊಳಗಾಗಿ ಪತ್ತೆ ಮಾಡಿ ಆತ ಕಳ್ಳತನ ಮಾಡಿದ್ದ 6,54, 360 ರೂಪಾಯಿ ನಗದು ಹಾಗೂ ಸಿಪಿಯು, ಮಾನಿಟರ್, ಲ್ಯಾಪ್ಟಾಪ್ ಸೇರಿದಂತೆ ವಶಪಡಿಸಿಕೊಂಡಿದ್ದಾರೆ.ಆರೋಪಿಯನ್ನು ನಾಗಮಂಗಲ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಾಗಮಂಗಲ ವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಯವರು ಉತ್ತಮ ಕರ್ತವ್ಯಕ್ಕೆ ಶ್ಲಾಘಿಸಿದ್ದಾರೆ.
