ಉದಯವಾಹಿನಿ ಅರಸೀಕೆರೆ : ಪಡಿತರ ವಿತರಕರ ಸಂಘದಲ್ಲಿ ಇತ್ತೀಚಿಗೆ ದಾಸ್ತಾನು ಮಳಿಗೆ ಒಂದರಲ್ಲಿ ಪಡಿತರ ವಿತರಕರು ಸೇರಿ ಅರಸಿಕೆರೆ ತಾಲೂಕು ಅಧ್ಯಕ್ಷರನ್ನಾಗಿ ವೇದಮೂರ್ತಿ. ಉಪಾಧ್ಯಕ್ಷರನ್ನಾಗಿ ಚನ್ನಾಪುರ ಶಿವರಾಜ್. ಕಾರ್ಯದರ್ಶಿಯಾಗಿ . ಕಲ್ಯಾಡಿ ರಾಮಸ್ವಾಮಿ . ಮತ್ತು ಖಜಾಂಚಿಯಾಗಿ. ಬಾಣಾವರ ಜಯಣ್ಣ ಇವರನ್ನು ತಾಲೂಕಿನ ಎಲ್ಲಾ ಪಡಿತರ ವಿತರಕರು ಸೇರಿ ಒಮ್ಮತದಿಂದ ಆಯ್ಕೆ ಮಾಡಿದರು. 21 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸಹ ಆಯ್ಕೆ ಮಾಡಿದರು. ನೂತನ ಅಧ್ಯಕ್ಷರಾದ ವೇದಮೂರ್ತಿ ಉಪಾಧ್ಯಕ್ಷರಾದ ಚನ್ನಾಪುರ ಶಿವರಾಜ್. ಖಜಾಂಚಿ ಬಿಎಮ್ ಜಯಣ್ಣ ಕಾರ್ಯದರ್ಶಿ ಕಲ್ಯಾಡಿ ರಾಮಸ್ವಾಮಿ. ಕಾರ್ಯಕಾರಿ ಸಮಿತಿ ಸದಸ್ಯರಾದ. ರೂಪೇಶ್ ಮತ್ತು ಕುಡುಕುಂದಿ ಪ್ರಕಾಶ್. ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ಸಂಘವನ್ನು ಸುವ್ಯವಸ್ಥಿತವಾಗಿ ನಡೆದುಕೊಂಡು ಹೋಗಲು ತಾಲೂಕಿನ ಎಲ್ಲಾ ಪಡಿತರ ಸಹಕಾರ ನೀಡಬೇಕು ಎಂದರು ಸಂಘದ ಸಭೆಯ ಮುಂಚೆ ಮಾಜಿ ಅಧ್ಯಕ್ಷರಾದ ಚಿಕ್ಕ ಗಂಡಸಿ ನಾಗರಾಜ್ ರವರಿಗೆ ಸಂತಾಪ ಸೂಚಿಸಿದರು.
