ಉದಯವಾಹಿನಿ ಅರಸೀಕೆರೆ : ರಾಜ್ಯದಲ್ಲಿ ರಾಗಿ , ತೆಂಗು ಕೊಬ್ಬರಿ ಇನ್ನು ಹಲವು ಕೃಷಿ ಪದಾರ್ಥಗಳನ್ನು ರಾಜ್ಯ ಮತ್ತು ವಿವಿಧ ರಾಜ್ಯಗಳಿಗೆ ರಫ್ತು ಮಾಡುವ ಅತಿ ದೊಡ್ಡ ಮಾರುಕಟ್ಟೆ ಯಾಗಿದ್ದು ಸರ್ಕಾರಕ್ಕೂ ಸಹ ಅತಿ ಹೆಚ್ಚು ಲಾಭಾಂಶವನ್ನು ತಂದುಕೊಡುವ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಅರಸೀಕೆರೆಯು ಒಂದು ಇಂತಹ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಹೊಂದಿರುವ ಅರಸಿಕೆರೆಯಲ್ಲಿ ಕಳೆದ ಒಂದು ವರ್ಷದಿಂದಲೂ ಸಹ ವೆ ಬ್ರಿಡ್ಜ್ ತೂಕಮಾಪನ ಯಂತ್ರ ಕೆಟ್ಟು ಹೋಗಿದ್ದು ಇಲ್ಲಿನ ರೈತರಿಗೆ ತುಂಬಾ ಅನಾನುಕೂಲ ಉಂಟಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಕನಂಕಂಚೇನಹಳ್ಳಿ ಪ್ರಸನ್ನ ಕುಮಾರ್ ಹೇಳಿದ್ದಾರೆ. ಅಲ್ಲದೆ ಇದೇ ಮಾರುಕಟ್ಟೆ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಇಲಾಖೆಯ ಸರ್ಕಾರಿ ಗೋಧಾಮಗಳಿದ್ದು ಈ ಗೋಧಾಮುಗಳಿಂದ ಇಡೀ ತಾಲೂಕಿನ ಸುಮಾರು 200 ನ್ಯಾಯ ಬೆಲೆ ಅಂಗಡಿಗಳಿಗೆ ಆಹಾರ ಪಡಿತರ ವಸ್ತುಗಳಾದ ಅಕ್ಕಿ ರಾಗಿ ಇನ್ನಿತರ ಪಡಿತರ ವಸ್ತುಗಳು ಸರಬರಾಜಾಗುತ್ತದೆ ಈ ವಸ್ತುಗಳು ಪಡಿತರ ಅಂಗಡಿಗಳಿಗೆ ಸರಬರಾಜು ಆಗುವ ಸಮಯದಲ್ಲಿ ಸರ್ಕಾರಿ ವೇಬ್ರಿಡ್ಜ್ ತೂಕ ಮಾಪನ ಯಂತ್ರ ಕೆಟ್ಟು ಹೋಗಿರುವುದರಿಂದ ಸುಮಾರು ಹತ್ತು ಹದಿನೈದು ಕಿಲೋಮೀಟರ್ ದೂರ ತೂಕ ಮಾಡಿಸಿಕೊಳ್ಳಲು ಲಾರಿಗಳು ತೆರಳಬೇಕಾಗುತ್ತದೆ ಇದರಿಂದ ತುಂಬಾ ತೊಂದರೆ ಉಂಟಾಗಿದ್ದು ಹಲವಾರು ಬಾರಿ ದೂರು ನೀಡಿದರು ಸಹ ಪ್ರಯೋಜನವಾಗಿಲ್ಲವೆಂದು ಕೆಲವು ಅಧಿಕಾರಿಗಳು ನೊಂದು ನುಡಿಯುತ್ತಾರೆ ಕೃಷಿ ಉತ್ಪನ್ನ ಮಾರುಕಟ್ಟೆ ಅರಸಿಕೆರೆ ಅಧಿಕಾರಿಗಳು ಕೂಡಲೇ ವೇ ಬ್ರಿಡ್ಜ್ ತೂಕ ಮಾಪನ ಯಂತ್ರವನ್ನು ಸರಿಪಡಿಸಿದೆ ಇದ್ದಲ್ಲಿ ಕಚೇರಿಯ ಮುಂದೆ ಧರಣಿಯನ್ನು ಸಹ ನಡೆಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಕನಕಾಂಚೇನಹಳ್ಳಿ ಪ್ರಸನ್ನ ಕುಮಾರ್ ಎಚ್ಚರಿಕೆ ನೀಡಿದ್ದಾರೆ ನೂತನ ಜಿಲ್ಲಾಧಿಕಾರಿಗಳು ಆಹಾರ ಇಲಾಖೆ ಉಪ ನಿರ್ದೇಶಕರು ಕೂಡಲೇ ಇತ್ತ ಗಮನಿಸಬೇಕಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ
