ಉದಯವಾಹಿನಿ, ಕಲ್ಪೆಟ್ಟ (ಕೇರಳ) : ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರವನ್ನು ಸುಡಲು ನಿಮಗೆ ಎರಡು ತಿಂಗಳು ಬೇಕಾಯಿತು ಎಂದು ಬಿಜೆಪಿ ವಿರುದ್ದ ನೇರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಣಿಪುರದಲ್ಲಿ ಶಾಂತಿ,ಪ್ರೀತಿ ಮರಳಿ ತರಲು ನಮಗೆ ಐದು ವರ್ಷ ಬೇಕಾಗಬಹುದು, ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಶಪಥ ಮಾಡಿದ್ದಾರೆ.ಬಿಜೆಪಿ ಮತ್ತು ಆರ್‍ಎಸ್‍ಎಸ್‍ಗೆ ಕುಟುಂಬ ಎಂದರೆ ಏನು ಎಂದು ಅರ್ಥವಾಗುತ್ತಿಲ್ಲ ಎಂದು ನೇರ ವಾಗ್ದಾಳಿ ನಡೆಸಿದ ಅವರು “ಎಲ್ಲೆಡೆ ರಕ್ತ, ಎಲ್ಲೆಲ್ಲೂ ಕೊಲೆ, ಎಲ್ಲೆಲ್ಲೂ ಅತ್ಯಾಚಾರ ಮಣಿಪುರದ ಸದ್ಯದ ಪರಿಸ್ಥಿತಿ. ಅದನ್ನು ಸರಿದಾರಿಗೆ ತರಲು ಶ್ರಮಿಸುವುದಾಗಿ ತಿಳಿಸಿದ್ದಾರೆ.ಸಂಸದ ಸ್ಥಾನ ಮರಳಿ ಪಡೆದ ನಂತರ ತಮ್ಮ ಮತಕ್ಷೇತ್ರ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅವರು ಕಲ್ಪೆಟ್ಟದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ಸಂಸತ್ತಿನಲ್ಲಿ 2 ಗಂಟೆ 13 ನಿಮಿಷ ಮಾತನಾಡಿದರು ಆದರೆ ಕೇವಲ ಅವರು ಮಣಿಪುರದ ಬಗ್ಗೆ 2 ನಿಮಿಷ ಮಾತನಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.ತಮ್ಮ ಭಾಷಣದಲ್ಲಿ ನಕ್ಕರು, ತಮಾಷೆ ಮಾಡಿದರು, ಜೊತೆಗೆ ಅವರ ಸಚಿವ ಸಂಪುಟವೈ ನಕ್ಕು ಮಣಿಪುರದ ಜನರನ್ನು ತಮಾಷೆ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಸಂಸದ ಸ್ಥಾನದಿಂದ ಅನರ್ಹ ಮಾಡಿದರೆ ನಿಮ್ಮನ್ನು ಮತ್ತು ನನ್ನನ್ನು ಬೇರ್ಪಡಿಸಲು ಪ್ರಯತ್ನಿಸಬಹುದು ಎಂದು ಭಾವಿಸಿದ್ದಾರೆ. ಇದರಿಂದ ಮತ್ತಷ್ಟು ಹತ್ತಿರವಾಗಲು ಸಹಕಾರಿಯಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!