
ಉದಯವಾಹಿನಿ ದೇವದುರ್ಗ: ಐದು ವರ್ಷದೊಳಗಿನ ಮಗುವಿಗೆ ಏಳು ಮಾರಕ ರೋಗಗಳಿಂದ ರಕ್ಷಣೆ ನೀಡುವ ದೃಷ್ಟಿಯಿಂದ ಇಂಧ್ರ ಧನುಷ್ ಲಸಿಕೆ ಹಾಕುವ ಅಭಿಯಾನ ಆರೋಗ್ಯ ಇಲಾಖೆ ಹಮ್ಮಿಕೊಂಡಿದೆ. 5ವರ್ಷದೊಳಿಗೆ ಮಗು ಹಾಗೂ ಗರ್ಭಿಣಿ ಲಸಿಕೆ ಪಡೆಯಬೇಕು ಸಮುದಾಯ ಆರೋಗ್ಯ ಅಧಿಕಾರಿ ಪ್ರಶಾಂತ ಎಂದು ಹೇಳಿದರು.
ತಾಲೂಕಿನ ಹೆಗ್ಗಡದಿನ್ನಿ ಅಂಗನವಾಡಿ ಕೇಂದ್ರದಲ್ಲಿ ನಾಗಡದಿನ್ನಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಇಂಧ್ರ ಧನುಷ್ ಲಸಿಕೆ ಅಭಿಯಾನದಲ್ಲಿ ಶನಿವಾರ ಮಾತನಾಡಿದರು. ಮೂರು ತಿಂಗಳ ಕಾಲ ಲಸಿಕಾ ಅಭಿಯಾನ ನಡೆಯಲಿದ್ದು ಗರ್ಭಿಣಿ ಹಾಗೂ ಮಕ್ಕಳು ಲಸಿಕೆ ಪಡೆಯಬೇಕು ಎಂದರು.
ಮಹಿಳಾ ಆರೋಗ್ಯ ಸಹಾಯಕಿ ವಾಣಿಶ್ರೀ ಮಾತನಾಡಿ, 0ದಿಂದ 2ವರ್ಷದ ಮಗು ಹಾಗೂ 2ರಿಂದ 5ವರ್ಷದ ಮಗುವಿಗೆ ಎರಡು ಹಂತದಲ್ಲಿ ಇಂಧ್ರಧನುಷ್ ಲಸಿಕೆ ಹಾಕಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು ಪಲ್ಸ್ ಪೊಲಿಯೋ ಲಸಿಕೆಯಿಂದ ವಂಚಿತಗೊಂಡ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಲಸಿಕೆ ಹಾಕಲಾಗುತ್ತಿದೆ. ಬಹುಮುಖ್ಯವಾಗಿ ದುಡಿಯಲು ಬಂದ, ಗುಳೆಹೋದ ಹಾಗೂ ಪರಜಿಲ್ಲೆ, ರಾಜ್ಯದಿಂದ ನಮ್ಮಲ್ಲಿಗೆ ದುಡಿಯಲು ಬಂದ ಪಾಲಕರನ್ನು ಗುರುತಿಸಿ ಅವರ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ಆರೋಗ್ಯ ಸಹಾಯಕಿ ಕಲಾವತಿ, ಅಂಗನವಾಡಿ ಕಾರ್ಯಕರ್ತೆ ಕವಿತಾ, ಸಂಗೀತಾ, ಆಶಾ ಕಾರ್ಯಕರ್ತೆ ಗೌರಮ್ಮ, ಮಲ್ಲಮ್ಮ ಇತರರಿದ್ದರು.
